USAಯಲ್ಲಿ ಚೀನಿ ಯಾತ್ರಿಕರಿಗೆ ಕೊವಿಡ್​​​ ಟೆಸ್ಟ್

ಶನಿವಾರ, 31 ಡಿಸೆಂಬರ್ 2022 (19:01 IST)
ಚೀನಾದಲ್ಲಿ ಕೊವಿಡ್-19 ಸೋಂಕಿನ ಅಬ್ಬರ ಹೆಚ್ಚಾಗುತ್ತಲೇ ಇದೆ. ಚೀನಾದಿಂದಲೇ 2 ವರ್ಷಗಳ ಹಿಂದೆ ಇಡೀ ವಿಶ್ವಾದ್ಯಂತ ಹರಡಿದ್ದ ಕೊರೋನಾ ವೈರಸ್ ಇದೀಗ ಹೊಸ ರೂಪಾಂತರದಲ್ಲಿ ಮತ್ತೆ ಆತಂಕ ಮೂಡಿಸಿದೆ. ಹೀಗಾಗಿ, ಚೀನಾದಿಂದ ಬರುವ ಪ್ರಯಾಣಿಕರ ಮೇಲೆ ಇತರೆ ದೇಶಗಳು ಹೆಚ್ಚಿನ ನಿಗಾ ಇರಿಸಿವೆ. ಅಮೆರಿಕದಲ್ಲಿ ಕೂಡ ಚೀನಾದಿಂದ ವಿಮಾನದಲ್ಲಿ ಆಗಮಿಸುವ ಎಲ್ಲ ಪ್ರಯಾಣಿಕರಿಗೂ ಕೊವಿಡ್ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ. ಕೊವಿಡ್ ಪ್ರಕರಣಗಳ ರಾಷ್ಟ್ರವ್ಯಾಪಿ ಏರಿಕೆಗೆ ಪ್ರತಿಕ್ರಿಯೆಯಾಗಿ ಚೀನಾ ತನ್ನ ಆ್ಯಂಟಿ ವೈರಸ್ ನಿಯಮಗಳನ್ನು ಸಡಿಲಗೊಳಿಸಿದೆ. ಚೀನಾದಲ್ಲಿ ಹೊಸ ಸೋಂಕುಗಳ ಸಂಖ್ಯೆಯನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದ್ದರೂ ಚೀನಾದಲ್ಲಿ ಇನ್ನೂ ಕೊವಿಡ್ ನಿಯಂತ್ರಣ ಸಂಪೂರ್ಣವಾಗಿ ಜಾರಿಯಾಗಿಲ್ಲ. ಜನವರಿ 5ರಿಂದ 2 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ವಿಮಾನ ಪ್ರಯಾಣಿಕರು ಚೀನಾ, ಹಾಂಗ್ ಕಾಂಗ್ ಅಥವಾ ಮಕಾವೊದಿಂದ ಹೊರಡುವ 2 ದಿನಗಳ ಮೊದಲು ಕೊವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕೊವಿಡ್ ನೆಗೆಟಿವ್ ಫಲಿತಾಂಶ ಬಂದರೆ ಮಾತ್ರ ಅಮೆರಿಕಕ್ಕೆ ಪ್ರವೇಶಿಸಲು ಅನುಮತಿ ನೀಡುವುದಾಗಿ ಅಮೆರಿಕದ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ