ಆಜಾನ್ & ಸುಪ್ರಭಾತಕ್ಕೆ ಹೊಸ ಗೈಡ್ಲೈನ್ಸ್
ಆಜಾನ್ ಮತ್ತು ಸುಪ್ರಭಾತ ವಿವಾದಕ್ಕೆ ತೆರೆ ಎಳೆಯಲು ಧ್ವನಿವರ್ಧಕ ವಿಚಾರದಲ್ಲಿ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಸುಪ್ರೀಂಕೋರ್ಟ್ 2002ರ ಆದೇಶದಂತೆ ಯಾವ ಪ್ರದೇಶದಲ್ಲಿ ಎಷ್ಟು ಡೆಸಿಬಲ್ ಧ್ವನಿವರ್ಧಕ ಬಳಸಬೇಕೆಂದು ರಾಜ್ಯ ಸರ್ಕಾರ ತನ್ನ ಮಾರ್ಗಸೂಚಿಯಲ್ಲಿ ತಿಳಿಸಿದೆ..ಯಾವ ಪ್ರಮಾಣದಲ್ಲಿ ಶಬ್ದ ಬರುವಂತೆ ಧ್ವನಿ ವರ್ಧಕ ಬಳಸಿಕೊಳ್ಳಬಹುದು..? ಮಾರ್ಗಸೂಚಿಯಲ್ಲಿ ಕೊಟ್ಟಿರುವ ಡೆಸಿಬಲ್ ಪ್ರಮಾಣ ಎಷ್ಟು..? ಮತ್ತು ಇಂತಿಷ್ಟೇ ಡೆಸಿಬಲ್ ಇರುವಂತೆ ನಿಗದಿ ಪಡಿಸಲಾಗಿದೆ..ಅಲ್ಲದೇ, ಯಾರು ಧ್ವನಿವರ್ಧಕ ಅಳವಡಿಸಲು ಅನುಮತಿ ಪಡೆದಿಲ್ಲವೋ ಅವರು ಸ್ವಯಂ ಪ್ರೇರಿತವಾಗಿ ಧ್ವನಿವರ್ಧಕಗಳನ್ನ 15 ದಿನಗಳಲ್ಲಿ ತೆರವು ಮಾಡಲು ಸೂಚಿಸಲಾಗಿದೆ..ಇನ್ನು, ಧ್ವನಿವರ್ಧಕ ವಿಚಾರದಲ್ಲಿ ಸಿಕ್ಕಿಬಿದ್ದರೆ ದಂಡ ಮತ್ತು ಪರಿಸರ ಸಂರಕ್ಷಣೆ ಕಾಯ್ದೆಯಡಿ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಹೊಸ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.