ಇಂದಿನಿಂದ ಬೆಂಗಳೂರು ಟ್ರಾಫಿಕ್ ಮೇಲೆ ಡ್ರೋನ್ ಕಣ್ಣಿಡಲಾಗಿದೆ.ಸಂಚಾರ ನಿರ್ವಹಣೆ, ವಾಹನ ದಟ್ಟಣೆಗೆ ಡ್ರೋನ್ಗಳ ಬಳಕೆ ಮಾಡಲಾಗಿದೆ.ಪ್ರಾಯೋಗಿಕವಾಗಿ ಇಂದಿನಿಂದ 8 ಕಡೆ ಡ್ರೋನ್ ಸಂಚಾರ ಆರಂಭಿಸಲಾಗಿದೆ.ಸಂಚಾರ ದಟ್ಟಣೆಯ ಜಾಗಗಳಲ್ಲಿ ಡ್ರೋನ್ ಮೂಲಕ ಚಿತ್ರೀಕರಣ ಮಾಡಿ ಸಂಚಾರ ದಟ್ಟಣೆಯ ಮಾಹಿತಿ ಸಂಗ್ರಹಿಸಲಾಗುತ್ತೆ.ಸಂಚಾರ ನಿರ್ವಹಣಾ ಕೇಂದ್ರ (ಟಿಎಂಸಿ)ದಲ್ಲಿ ವಿಶ್ಲೇಷಿಸಿ ಸಂಚಾರ ನಿರ್ವಹಣೆ ಮಾಡಲಾಗುತ್ತೆ.ಸಂಚಾರ ದಟ್ಟಣೆ ವೀಕ್ಷಿಸಿ ಟ್ರಾಫಿಕ್ ಪೊಲೀಸರು ಕ್ರಮ ತೆಗೆದುಕೊಳ್ತಾರೆ.ಸೇಫ್ ಸಿಟಿ ಯೋಜನೆಯಡಿ ಖರೀದಿಯಾಗಿರುವ 8 ಡ್ರೋನ್ ಗಳನ್ನ 4 ಸಂಚಾರ ವಿಭಾಗಕ್ಕೆ ಡ್ರೋನ್ಗಳ ಹಂಚಿಕೆ ಮಾಡಲಾಗಿದೆ.ಸಂಚಾರ ಪೊಲೀಸರಿಗೆ ಡ್ರೋನ್ ಬಳಕೆ ಬಗ್ಗೆ ತರಬೇತಿ ನೀಡಲಾಗುತ್ತೆ.ಸದ್ಯ ಹೆಬ್ಬಾಳ ಮೇಲ್ಸೇತುವೆ, ಸಿಲ್ಕ್ ಬೋರ್ಡ್ ಜಂಕ್ಷನ್, ಕೆ.ಆರ್.ಪುರ ಮೇಲ್ಸೇತುವೆ, ಮಾರತ್‌ಹಳ್ಳಿ, ಸಾರಕ್ಕಿ ಜಂಕ್ಷನ್, ಬನಶಂಕರಿ ಬಸ್ ನಿಲ್ದಾಣದ ಬಳಿ, ಇಬ್ಬಲೂರು ಜಂಕ್ಷನ್, ಟ್ರಿನಿಟಿ ಜಂಕ್ಷನ್ ನಲ್ಲಿ ಬಳಕೆ ಮಾಡಲಾಗುತ್ತೆ.ಸದ್ಯ ಪ್ರಾಯೋಗಿಕ ಹಂತದಲ್ಲಿ ಡ್ರೋಣ್ ಪೊಲೀಸರು ಹಾರಿಸ್ತಿದ್ದಾರೆ.ಇಂದು ಪೀಕ್ ಹವರ್ ನಲ್ಲಿ ಮೊದಲ ಬಾರಿ ಡ್ರೋಣ್ ಹಾರಿಸಿ ಪರಿಶೀಲನೆ ನಡೆಸಲಾಗುತ್ತೆ.