ಸರ್ಕಾರಕ್ಕೆ ಶುಭ ಶಕುನವೇಕೋ ‘ಕೈ’ ಹಿಡಿದಂತಿಲ್ಲ : ವಿಜಯೇಂದ್ರ

ಸೋಮವಾರ, 19 ಜೂನ್ 2023 (13:18 IST)
ಬೆಂಗಳೂರು : ರಾಜ್ಯದಲ್ಲಿ ಮಳೆ ಕಡಿಮೆಯಾಗಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಬಿ.ವೈ ವಿಜಯೇಂದ್ರ ಕಾಂಗ್ರೆಸ್ ಕಾಲೆಳೆದಿದ್ದಾರೆ.
 
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಗ್ಯಾರಂಟಿ ಕಸರತ್ತಿನಲ್ಲಿ ಕಳೆದು ಹೋಗಿರುವ ಕಾಂಗ್ರೆಸ್ ಸರ್ಕಾರಕ್ಕೆ ಶುಭ ಶಕುನವೇಕೋ ‘ಕೈ’ ಹಿಡಿದಂತಿಲ್ಲ ಎಂದಿದ್ದಾರೆ. 

ಗ್ಯಾರಂಟಿ ಕಸರತ್ತಿನಲ್ಲಿ ಕಳೆದು ಹೋಗಿರುವ ಕಾಂಗ್ರೆಸ್ ಸರ್ಕಾರಕ್ಕೆ ಶುಭ ಶಕುನವೇಕೋ ‘ಕೈ’ ಹಿಡಿದಂತಿಲ್ಲ. ವರುಣನ ಅವಕೃಪೆ ಇಡೀ ರಾಜ್ಯವನ್ನಾವರಿಸಿದೆ. ಬರಗಾಲ ತನ್ನ ಕೆನ್ನಾಲಿಗೆ ಚಾಚಲು ಆರಂಭಿಸಿದೆ. ನೀರಿಲ್ಲದೆ ತತ್ತರದಿಂದ ಮಹಿಳೆಯರು ಆಕ್ರೋಶಿತರಾಗಿದ್ದಾರೆ. ಮುಂಜಾಗ್ರತೆ ವಹಿಸದಿದ್ದರೆ, ಉದ್ಭವಿಸುವ ಭೀಕರತೆಗೆ ಸರ್ಕಾರವೇ ಹೊಣೆಯಾಗಲಿದೆ ಎಂದು ಕಿಡಿಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ