ಯೂನಿಯನ್ ಮೆಟ್ರೋ ಮಿತ್ರದಿಂದ ಈಗ ಹೊಸ ಪ್ಲಾನ್

geetha

ಮಂಗಳವಾರ, 6 ಫೆಬ್ರವರಿ 2024 (15:02 IST)
ಬೆಂಗಳೂರು-ಯೂನಿಯನ್ ಮೆಟ್ರೋ ಮಿತ್ರ ಆಟೋ ಇದೀಗ ವಾಟ್ಸ್ ಆ್ಯಪ್ ಮೂಲಕ ಬುಕಿಂಗ್ ಗೆ ರೆಡಿಯಾಗಿದೆ.ಆ್ಯಪ್ ಲೆಸ್ ಕ್ಯೂ ಅರ್ ಕೋಡ್ ಬಳಿಕ, ಈಗ ವಾಟ್ಸ್ ಆ್ಯಪ್ ಆಟೋ ಬುಕಿಂಗ್ ಗೂ ಯುನಿಯನ್ ಮೆಟ್ರೋ ಮಿತ್ರ ವತಿಯಿಂದ ಡೊರ್ ಸ್ಟೆಪ್ ರೈಡ್ ಮಾಡಲಾಗಿದೆ.ವಾಟ್ಸ್ ಆ್ಯಪ್ ನಲ್ಲೆ ಗ್ರಾಹಕರು ತಮ್ಮ ರೈಡ್ ಗಳನ್ನು ಸುಲಭವಾಗಿ ಬುಕ್ ಮಾಡಬಹುದು.ವಾಟ್ಸ್ ಆ್ಯಪ್ ಚಾಟ್ ಬಾಕ್ಸ್ ನಲ್ಲಿ ಆಟೋ ಟೈಪ್ ಟೆಕ್ಸ್ಟ್ ಮಾಡಿ ಜಿಪಿಎಸ್ ಲೋಕೆಶನ್ ನೊಂದಿಗೆ ವಾಟ್ಸ್ ಆ್ಯಪ್ ನಲ್ಲಿ ಆಟೋ ಬುಕಿಂಗ್ ಮಾಡಬಹುದು.
 
ವಾಟ್ಸ್ ಅ್ಯಪ್ ಆಟೋ ಬುಕಿಂಗ್ ಎಲ್ಲ ಮೆಟ್ರೋ ಸ್ಟೆಷನ್ ಗಳ ಲಿಸ್ಟ್ ನಲ್ಲಿ ಅವೆಲೆಬಲ್ ಇದೆ.ಮೆಟ್ರೋ ಸ್ಟೆಷನ್ ಬಿಟ್ಟು ಬೇರೆ ಸ್ಪಾಟ್ ಹೋಗಬೇಕಾ.ಗ್ರಾಹಕರು ತಮ್ಮ ಲೋಕೆಶನ್ ಆಟೋ ಚಾಲಕರಿಗೆ ಕಳುಹಿಸಿ.ಜಸ್ಟ್ ಒಂದು ಒಟಿಪಿ ಮೂಲಕ ರೈಡ್ ಸ್ಟಾರ್ಟ್ ಮಾಡಬಹುದು.ಯೂನಿಯನ್ ಮೆಟ್ರೋ ಮಿತ್ರ ಅಟೋ ಮಿಟರ್ ಮೇಲೆ ಕೆವಲ 10ರೂ ಮಾತ್ರ ಸರ್ವಿಸ್ ಚಾರ್ಜೆಸ್ ಮಾಡಲಾಗುತ್ತದೆ ಎಂದು ಆಟೋರಿಕ್ಷ ಡ್ರೈವರ್ಸ ಯುನಿಯನ್ ಪ್ರಧಾನ ಕಾರ್ಯದರ್ಶಿ ಡಿ.ರುದ್ರಮೂರ್ತಿ ಹೇಳಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ