ರೈತರಿಗೆ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸಾಗಿಸಲು ರಾಜ್ಯ ಸರ್ಕಾರದಿಂದ ಹೊಸ ವ್ಯವಸ್ಥೆ. ಏನದು ಗೊತ್ತಾ?

ಮಂಗಳವಾರ, 26 ಫೆಬ್ರವರಿ 2019 (06:56 IST)
ಬೆಂಗಳೂರು : ಜನರಿಗೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಲು ಇರುವ ಓಲಾ, ಉಬರ್ ಕ್ಯಾಬ್ ವ್ಯವಸ್ಥೆ ರೀತಿಯಲ್ಲೇ ರೈತರಿಗೆ  ಕೃಷಿ ಉತ್ಪನ್ನ ಮಾರುಕಟ್ಟೆಗೆ ಸಾಗಿಸಲು ಟ್ರ್ಯಾಕ್ಟರ್ ವ್ಯವಸ್ಥೆ ಮಾಡಲಾಗುವುದು ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೇಂಪುರ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಬಂಡೆಪ್ಪ ಕಾಶೇಂಪುರ, ಕೃಷಿ ಉತ್ಪನ್ನ ಮಾರುಕಟ್ಟೆಗೆ ಸಾಗಿಸಲು ಓಲಾ, ಉಬರ್ ಕ್ಯಾಬ್ ಮಾದರಿಯಲ್ಲಿ ಟ್ರ್ಯಾಕ್ಟರ್ ವ್ಯವಸ್ಥೆ ಮಾಡಲಾಗುವುದು. ಹೊಲದಿಂದಲೇ ಉತ್ಪನ್ನಗಳನ್ನು ಸಾಗಿಸಲು ರೈತರು ಟ್ರ್ಯಾಕ್ಟರ್ ಬುಕ್ ಮಾಡಬಹುದುದಾಗಿದೆ. ಇನ್ಮುಂದೆ ಕೃಷಿ ಉತ್ಪನ್ನಗಳ ಖರೀದಿ ಗೋಡಾನ್‍ನಲ್ಲಿ ಆಗಲಿದ್ದು, ಇದಕ್ಕೆ ಆ್ಯಪ್ ಸಿದ್ಧ ಪಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

 

ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರೈತರ ಬೆಳೆಗಳಿಗೆ ಬೆಂಬಲ ಬೆಲೆ ತೊಂದರೆ ಆಗದಂತೆ ಲಭ್ಯ ಆಗುತ್ತಿದೆ. ಹೆಸರು, ಉದ್ದು, ಸೋಯಾ, ತೊಗರಿ ಎಲ್ಲ ಬೆಳೆಗಳಿಗೂ ಬೆಂಬಲ ಬೆಲೆ ಸಿಗುತ್ತಿದೆ. ಸರ್ಕಾರ ಸಾಲಮನ್ನಾ ಮಾಡಿ ರೈತರ ಭಾರ ಇಳಿಸಿದೆ. ಈ ಯೋಜನೆ ಚುರುಕಾಗಿ ಸಾಗುತ್ತಿದ್ದು, ಹಲವು ಯೋಜನೆಗಳ ಮೂಲಕ ರಾಜ್ಯ ಸರ್ಕಾರ ರೈತರ ಬದುಕು ಸುಭದ್ರಗೊಳಿಸಲು ಬದ್ಧವಾಗಿದೆ ಎಂದು  ಅವರು ಹೇಳಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ