ಹೊಸ ಟೂ ವೀಲರ್, ಕಾರ್ ಖರೀದಿ ಮಾಡಬೇಕೆಂದಿದ್ದೀರಾ: ರಾಜ್ಯ ಸರ್ಕಾರದ ಹೊಸ ಟ್ಯಾಕ್ಸ್ ಗೆ ರೆಡಿಯಾಗಿದೆ

Krishnaveni K

ಶುಕ್ರವಾರ, 17 ಜನವರಿ 2025 (14:00 IST)
Photo Credit: X
ಬೆಂಗಳೂರು: ಹೊಸ ದ್ವಿಚಕ್ರ ವಾಹನ, ಕಾರು ಖರೀದಿ ಮಾಡಬೇಕೆನ್ನುವ ಪ್ಲ್ಯಾನ್ ಮಾಡಿಕೊಂಡಿದ್ದೀರಾ ಹಾಗಿದ್ದರೆ ಇಂದೇ ಖರೀದಿ ಮಾಡಿ. ರಾಜ್ಯ ಸರ್ಕಾರ ಇದಕ್ಕೂ ಹೊಸ ಟ್ಯಾಕ್ಸ್ ವಿಧಿಸಲು ಮುಂದಾಗಿದೆ.

ಕೆಲವೇ ದಿನಗಳಲ್ಲಿ ಸೆಸ್ ಜಾರಿಯಾಗಲಿದ್ದು ರಾಜ್ಯದಲ್ಲಿ ವಾಹನ ಖರೀದಿ ಇನ್ನಷ್ಟು ದುಬಾರಿಯಾಗಲಿದೆ. ಈಗಾಗಲೇ ದ್ವಿಚಕ್ರ, ಕಾರು ಉತ್ಪನ್ನ ಕಂಪನಿಗಳು ತಮ್ಮ ಉತ್ಪನ್ನದ ದರ ಏರಿಕೆ ಮಾಡಿತ್ತು. ಇದರ ಮೇಲಿನಿಂದ ಈಗ ಸರ್ಕಾರವೂ ಉಪಕರ ವಿಧಿಸಲು ಮುಂದಾಗಿದೆ.

ರಾಜ್ಯ ಸರ್ಕಾರ ಕಾರ್ಮಿಕರ ಸಾಮಾಜಿಕ ಭದ್ರತೆ ನಿಧಿಗಾಗಿ ದ್ವಿಚಕ್ರ ವಾಹನ, ಸಾರಿಗೇತರ ಮೋಟಾರು ವಾಹನಗಳ ನೋಂದಣಿ ಸಂದರ್ಭದಲ್ಲಿ ರೂ. 500 ಮತ್ತು 1000 ರೂ. ಉಪಕರ ವಿಧಿಸುವ ಹೊಸ ನಿಯಮವನ್ನು ಸರ್ಕಾರ ಮುಂದಿನ ತಿಂಗಳಿನಿಂದಲೇ ಜಾರಿಗೆ ತರಲಿದೆ.

ಈ ಹೊಸ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಇದಕ್ಕೆ ರಾಜ್ಯಪಾಲರ ಸಹಿಯೂ ಬಿದ್ದಿದೆ. ಹಾಗಾಗಿ ಶೀಘ್ರದಲ್ಲೇ ಇದು ಜಾರಿಗೆ ಬರಲಿದೆ. ಹೊಸ ಸೆಸ್ ಸರ್ಕಾರದ ತಂತ್ರಾಂಶದಲ್ಲಿ ಅಪ್ ಡೇಟ್ ಆಗಬೇಕಿದೆ. ಇದಕ್ಕೆ 15 ದಿನ ಬೇಕಾಗಬಹುದು. ಅದಾದ ಬಳಿಕ ದ್ವಿಚಕ್ರ ವಾಹನಗಳು ಮತ್ತು ಕಾರುಗಳ ನೋಂದಣಿ ವೇಳೆ 500 ರೂ. ಮತ್ತು 1000 ರೂ. ನೀಡಬೇಕಾಗುತ್ತದೆ. ದೇಶದಲ್ಲೇ ಅತೀ ಹೆಚ್ಚು ಮೋಟಾರು ವಾಹನ ತೆರಿಗೆ ವಿಧಿಸುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಇನ್ನೀಗ ವಾಹನ ಖರೀದಿ ಇನ್ನಷ್ಟು ದುಬಾರಿಯಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ