ಜಾನುವಾರುಗಳ ರೋಗ ಪತ್ತೆಗೆ ನೂತನ ತಂತ್ರಜ್ಞಾನ

ಬುಧವಾರ, 14 ನವೆಂಬರ್ 2018 (18:42 IST)
ನೂತನ ತಂತ್ರಜ್ಞಾನದ ಚಿಪ್ ಅಳವಡಿಕೆ ಮೂಲಕ ಜಾನುವಾರುಗಳ ರೋಗ ಪತ್ತೆಗೆ ಮುಂದಾಗುವ ಮೂಲಕ ರೋಗ ನಿಯಂತ್ರಣಕ್ಕೆ ಸರಕಾರ ಹೊಸ ಹೆಜ್ಜೆ ಇಟ್ಟಿದೆ.

ನೂತನ ತಂತ್ರಜ್ಞಾನದ ಚಿಪ್ ಅಳವಡಿಕೆ ಮೂಲಕ ಜಾನುವಾರುಗಳ ರೋಗ ಪತ್ತೆಗೆ ಅನುಕೂಲವಾಗುತ್ತದೆ. ಅಷ್ಟೇ ಅಲ್ಲದೇ ಚಿಪ್ ಅಳವಡಿಕೆ ಮಾಡಿರುವ ಹಸುಗಳಿಗೆ ಕಾಲುಬಾಯಿ ಹಾಗೂ ಇನ್ನಿತರ ರೋಗಗಳು ಬಂದರೆ ಚಿಪ್ ಮೂಲಕ ಮಾಹಿತಿ ದೊರೆಯುತ್ತದೆ ಎಂದು ಪಶುಸಂಗೋಪನಾ ಮತ್ತು ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ತಿಳಿಸಿದ್ದಾರೆ.  

ಸರಕಾರ ಪಶು ಭಾಗ್ಯ ಯೋಜನೆ ಮೂಲಕ ಪಡೆದುಕೊಂಡು ಜಾನುವಾರುಗಳನ್ನು ಬೇರೆ ಕಡೆ ಮಾರಾಟ ಮಾಡುವುದಕ್ಕೂ ಕಡಿವಾಣ ಈ ಚಿಪ್ ಅಳವಡಿಕೆ ಮೂಲಕ ಬೀಳಲಿದೆ ಎಂದ ಅವರು, ಯಾವ ಜಾನುವಾರುಗಳು ಎಲ್ಲಿವೆ ಎಂಬ ಮಾಹಿತಿಯೂ ಲಭ್ಯವಾಗಲಿದೆ ಎಂದು ಹೇಳಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ