ಎನ್‌ಎಚ್‌ಎಐ ಪ್ರಧಾನ ವ್ಯವಸ್ಥಾಪಕನ ಬಂಧನ ಮಾಡಿದ ಸಿಬಿಐ

geetha

ಭಾನುವಾರ, 3 ಮಾರ್ಚ್ 2024 (16:40 IST)
ಮುಂಬೈ-ಯೋಜನಾ ನಿರ್ದೇಶಕರೂ ಆಗಿರುವ ಅರವಿಂದ ಕಾಳೆ ಅವರು ಖಾಸಗಿ ಕಂಪನಿಯಿಂದ ಲಂಚ ಪಡೆದಿದ್ದಾರೆ ಎಂದು ಆರೋಪಿಸಿ ಪ್ರಕರಣದಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜನರಲ್ ಮ್ಯಾನೇಜರ್ ಅನ್ನು ಸಿಬಿಐ ಬಂಧಿಸಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
 
ಕಾಳೆ ಬಂಧನದ ನಂತರ ಶೋಧ ಕಾರ್ಯಾಚರಣೆಯಲ್ಲಿ 20 ಲಕ್ಷ ರೂಪಾಯಿ ಲಂಚ ಸೇರಿದಂತೆ 45 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಂಡಿದ್ದು, ಕಾಳೆ ಮತ್ತು ಖಾಸಗಿ ಕಂಪನಿ ಸೇರಿದಂತೆ 11 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸಿಬಿಐ ಹೇಳಿದೆ.ಮಹಾರಾಷ್ಟ್ರದ ನಾಗ್ಪುರದಲ್ಲಿ 20 ಲಕ್ಷ ರೂಪಾಯಿ ಲಂಚ ಪಡೆದ ಆರೋಪದ ಪ್ರಕರಣದಲ್ಲಿ ಭಾಗಿಯಾದ್ದರು ಎಂದು ಮಾಹಿತಿ ತಿಳಿದು ಬಂಧನ ಮಾಡಿದ್ದು,ಘಟನೆಯ ಕುರಿತು ಸಿಬಿಐ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ