184 ಕ್ರಿಮಿನಲ್‌ಗಳನ್ನು ಭಾರತ ಜಿಯೋಲೊಕೇಟ್ ಮಾಡಿದೆ-ಸಿಬಿಐ
ಭಾರತವು ವಿವಿಧ ದೇಶಗಳಲ್ಲಿ 184 ಕ್ರಿಮಿನಲ್‌ಗಳನ್ನು ಜಿಯೋಲೊಕೇಟ್ ಮಾಡಿದ್ದು ಇಂಟರ್‌ಪೋಲ್ ಮತ್ತು ಆಯಾ ದೇಶಗಳ ಕಾನೂನು ಜಾರಿ ಸಂಸ್ಥೆಗಳ ಸಹಾಯದಿಂದ ಅವರ ವಾಪಸಾತಿಗೆ ಔಪಚಾರಿಕ ಪ್ರಕ್ರಿಯೆಗಳನ್ನು ಪ್ರಾರಂಭಿಸಿದೆ ಎಂದು CBI ತಿಳಿಸಿದೆ.
ವಿಯೆನ್ನಾದಲ್ಲಿ ನಡೆದ ಇಂಟರ್‌ಪೋಲ್ 91 ನೇ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಪ್ರವೀಣ್ ಸೂದ್ ಮತ್ತು NIA ಮುಖ್ಯಸ್ಥ ದಿನಕರ್ ಗುಪ್ತಾ ಅವರು “ಅಪರಾಧ, ಅಪರಾಧಿಗಳು ಮತ್ತು ಅಪರಾಧಗಳ ಆದಾಯಕ್ಕೆ ಯಾವುದೇ ಆಮಿಷಗಳನ್ನ ನಿರಾಕರಿಸಬೇಕು ಎಂದು ಒತ್ತಿ ಹೇಳಿದ್ದಾರೆ.