ನೈಟ್ ಕರ್ಫ್ಯೂ ಎಫೆಕ್ಟ್: ರಾಜಧಾನಿ ಬೆಂಗಳೂರು ಸ್ತಬ್ಧ

ಬುಧವಾರ, 29 ಡಿಸೆಂಬರ್ 2021 (20:31 IST)
ಒಮಿಕ್ರಾನ್ ನಿಯಂತ್ರಿಸಲು ರಾಜ್ಯದೆಲ್ಲೆಡೆ ನಿನ್ನೆಯಿಂದ ನೈಟ್ ಕರ್ಫ್ಯೂ ಜಾರಿಯಾಗಿದ್ದು, ರಾಜಧಾನಿ ಬೆಂಗಳೂರು 10ಗಂಟೆ ನಂತರ ಸಂಪೂರ್ಣ ಸ್ತಬ್ಧವಾಗಿತ್ತು.
ಸಿಲಿಕಾನ್ ಸಿಟಿ ಪೊಲೀಸರು ನಗರದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದು, ಅನಗತ್ಯವಾದ ಓಡಾಟಕ್ಕೆ ಬ್ರೇಕ್ ಹಾಕಿದ್ದಾರೆ. ನೈಟ್ ಕರ್ಫ್ಯೂ ಮೊದಲ ದಿನ ಪೊಲೀಸರು ಸ್ಟ್ರಿಕ್ಟ್ ಇರುವುದರಿಲ್ಲ ಎಂದು ಅನಗತ್ಯವಾಗಿ ರೋಡಿಗಿಳಿದವರ ಬಳಿ ಪೊಲೀಸರು ಫೈನ್ ಕಟ್ಟಿಸಿಕೊಂಡಿದ್ದಾರೆ.
ಅಗತ್ಯ ಸೇವೆಗಳನ್ನು ಹೊರತುಪಡಿಸಿ ನಿನ್ನೆ ಯಾವುದೇ ಸೇವೆಗಳು ಲಭ್ಯವಿರಲಿಲ್ಲ.10 ರ ಒಳಗೆ ಎಲ್ಲ ಅಂಗಡಿ ಮುಂಗಟ್ಟುಗಳು ಬಾಗಿಲು ಮುಚ್ಚಿದ್ದವು. ಹೆಚ್ಚಿನ ಸಂಖ್ಯೆಯಲ್ಲೇ ಪೊಲೀಸರು ಕರ್ತವ್ಯ ನಿರ್ವಹಿಸಿದ್ದು, ಸಂಪೂರ್ಣ ನಿಯಮ ಪಾಲನೆಯಾಗಿದೆ.
10 ಗಂಟೆ ಒಳಗೆ ಮನೆ ಸೇರಲು ಜನ ಬಸ್, ಆಟೋ ಹಾಗೂ ಕ್ಯಾಬ್‌ಗಳಿಗಾಗಿ ಪರದಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. 10  ಗಂಟೆಯ ಮೇಲೂ ಸದಾ ಜನಜಂಗುಳಿ ತುಂಬಿರುವ ಬೆಂಗಳೂರು ನಿನ್ನೆ ನಿಶ್ಯಬ್ಧವಾಗಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ