ನಿಜಾಮುದ್ದಿನ್ ಜಮಾತ್ ಧಾರ್ಮಿಕ ಸಭೆ: ಕೊರೊನಾ ಶಂಕಿತರಿಗೆ ಮಾಡಿದ್ದೇನು?

ಬುಧವಾರ, 1 ಏಪ್ರಿಲ್ 2020 (13:44 IST)
ದಿಲ್ಲಿಯ ನಿಜಾಮುದ್ದೀನ್ ಜಮಾತ್ ಮಸೀದಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ಜನರಿಗೆ ಜಿಲ್ಲಾಡಳಿತ ಹೀಗೆ ಮಾಡುತ್ತಿದೆ.

ಉತ್ತರಕನ್ನಡ ಜಿಲ್ಲೆಯ ಇಬ್ಬರು ವ್ಯಕ್ತಿಗಳ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಉತ್ತರಕನ್ನಡ ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ್ ಕೆ. ತಿಳಿಸಿದ್ದಾರೆ.

ದಾಂಡೇಲಿಯ ಇಬ್ಬರು ವ್ಯಕ್ತಿಗಳು ಈ ಧರ್ಮ ಸಭೆಯಲ್ಲಿ ಭಾಗವಹಿಸಿದ್ದರು. ದಿಲ್ಲಿಯಿಂದ ಮಾ. 12 ರಂದು ಈ ಇಬ್ಬರು ವ್ಯಕ್ತಿಗಳು ದಾಂಡೇಲಿಗೆ ವಾಪಸ್ಸಾಗಿದ್ದರು. ಈಗಾಗಲೇ 14 ದಿನಗಳ ಅವಧಿ ಮುಗಿದಿದ್ದರೂ ಸಹ ಅವರ ಗಂಟಲು ದ್ರವದ ಮಾದರಿಯನ್ನು ಕೊವಿಡ್-19 ಸೋಂಕು ಪರೀಕ್ಷೆಗಾಗಿ ಶಿವಮೊಗ್ಗದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ