ಲಸಿಕೆ ಪಡೆಯದ ಕಾರಣ ಕಾಲೇಜಿಗಿಲ್ಲ ಪ್ರವೇಶ

ಬುಧವಾರ, 8 ಸೆಪ್ಟಂಬರ್ 2021 (19:11 IST)
ಬೆಂಗಳೂರು: ರಾಜ್ಯದಲ್ಲಿ ಪದವಿ ಕಾಲೇಜು ಬಾಗಿಲು ತೆರೆದು ಒಂದು ತಿಂಗಳು ಪೂರ್ಣಗೊಂಡಿದೆ. ಆದರೂ, ಹೆಚ್ಚು ಕಡಿಮೆ ಮೂರು ಲP್ಷÀ ವಿದ್ಯಾರ್ಥಿಗಳು ಈಗಲೂ ಕಾಲೇಜಿನಿಂದ ದೂರ ಉಳಿz್ದÁರೆ. ಏಕೆಂದರೆ, ಇಂದಿಗೂ ಇವರುಗಳಿಗೆ ಕೊರೊನಾ ಲಸಿಕೆ ಒಂದು ಡೋಸ್ ಕೂಡಾ ಸಿಕ್ಕಿಲ್ಲ.
 
ಕೊರೊನಾ ಸೋಂಕು ಹಿನ್ನೆಲೆ ಬಂದ್ ಆಗಿದ್ದ ಕಾಲೇಜುಗಳು ಜುಲೈ 26 ರಂದು ಪುನಾರಂಭಿಸಲಾಯಿತು. ಆದರೆ, ಕಾಲೇಜಿಗೆ ಹಾಜರಾಗಲು ಕನಿಷ್ಠ ಕೊರೊನಾ ಲಸಿಕೆ ಒಂದು ಡೋಸ್ ಪಡೆದಿರಬೇಕು ಎಂಬ ನಿಯಮವನ್ನು ವಿಧಿಸಲಾಗಿತ್ತು. ಜತೆಗೆ ಪದವಿ ಕಾಲೇಜು ವಿದ್ಯಾರ್ಥಿಗಳನ್ನು ಆದ್ಯತೆ ಮೇರೆಗೆ ಲಸಿಕೆ ನೀಡಲು ರಾಜ್ಯ ಸರ್ಕಾರ ಕ್ರಮವಹಿಸಿತ್ತು. ಆದರೂ, ರಾಜ್ಯದಲ್ಲಿರು ಒಟ್ಟಾರೆ 24.37 ಲಕ್ಷ ಪದವಿ ವಿದ್ಯಾರ್ಥಿಗಳ  ಪೈಕಿ ಈವರೆಗೂ 21.4 ಲಕ್ಷ ವಿದ್ಯಾರ್ಥಿಗಳು ಮಾತ್ರ ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ. 2.9 ಲಕ್ಷ ಮಂದಿ ಲಸಿಕೆಯಿಂದ ದೂರ ಉಳಿದಿದ್ದಾರೆ.
 
ಜಿಲ್ಲಾವಾರು ಪದವಿ ವಿದ್ಯಾರ್ಥಿಗಳ ದತ್ತಾಂಶ ಸಂಗ್ರಹಿಸಿ ಲಸಿಕೆ ನೀಡಲು, ಕಾಲೇಜುಗಳಲ್ಲಿ ಲಸಿಕಾ ಶಿಬಿರಗಳನ್ನು ಹಮ್ಮಿಕೊಂಡು ಶೀಘ್ರದಲ್ಲಿಯೇ ಎಲ್ಲಾ ವಿದ್ಯಾರ್ಥಿಗಳಿಗೆ ಲಸಿಕೆ ನೀಡಬೇಕು ಎಂದು ಸೂಚಿಸಲಾಗಿತ್ತು. ಕಾಲೇಜು ಆರಂಭವಾಗಿ ಐದು ವಾರ (35 ದಿನಗಳು) ಪೂರ್ಣಗೊಂಡಿದರೂ, ಎಲ್ಲಾ ವಿದ್ಯಾರ್ಥಿಗಳಿಗೆ ಲಸಿಕೆ ನೀಡಲು ಸಾಧ್ಯವಾಗಿಲ್ಲ. ಆರೋಗ್ಯ ಇಲಾಖೆ ಮಾಹಿತಿಯಂತೆ, 25 ಜಿಲ್ಲೆಗಳಲ್ಲಿ ಮಾತ್ರ ಪದವಿ ವಿದ್ಯಾರ್ಥಿಗಳ ಲಸಿಕಾ ಅಭಿಯಾನ ಶೇ.100 ಗುರಿಸಾಧನೆಯಾಗಿದೆ. ಐದು ಜಿಲ್ಲೆಗಳಲ್ಲಿ ಸಾಕಷ್ಟು ಹಿಂದುಳಿದಿದೆ.
 
ಸದ್ಯ ಹಲವು ಕಾಲೇಜುಗಳಲ್ಲಿ ಭೌತಿಕ ತರಗತಿ ಆರಂಭವಾಗಿರುವ ಹಿನ್ನೆಲೆ ಆನ್‌ಲೈನ್ ತರಗತಿ ನಿಲ್ಲಿಸಲಾಗಿದೆ. ಹೆಚ್ಚಿನ ಮಕ್ಕಳು ತರಗತಿಯಲ್ಲಿರುವ ಕಾರಣ ಆನ್‌ಲೈನ್ ತರಗತಿಗೆ ಆದ್ಯತೆ ನೀಡುತ್ತಿಲ್ಲ. ಇದರ ನೇರ ಪರಿಣಾಮ ವಿದ್ಯಾರ್ಥಿಗಳ ಭವಿಷ್ಯದ ಮೇಲಾಗುತ್ತಿದೆ.
 
ಎಲ್ಲಿ ಹೆಚ್ಚು ವಿದ್ಯಾರ್ಥಿಗಳು ಲಸಿಕೆಯಿಂದ ದೂರ?
ಜಿಲ್ಲೆ - ಲಸಿಕೆಯಿಂದ ದೂರ ಉಳಿದ ಪದವಿ ವಿದ್ಯಾರ್ಥಿಗಳು
ಬೆಂಗಳೂರು (ಬಿಬಿಎಂಪಿ ಸೇರಿ) - 3,03,341
ದಕ್ಷಿಣ ಕನ್ನಡ -67,125
ಮೈಸೂರು -35,438

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ