ರಾಜ್ಯದಲ್ಲಿ ಯಾವುದೇ BPL ಕಾರ್ಡ್ ರದ್ದು ಮಾಡುವುದಿಲ್ಲ-K H ಮುನಿಯಪ್ಪ

ಶನಿವಾರ, 26 ಆಗಸ್ಟ್ 2023 (17:35 IST)
BPL ಕಾರ್ಡ್ ದಾರರಿಗೆ ಆಹಾರ ಇಲಾಖೆ ಸಿಹಿ ಸುದ್ದಿ ಕೊಟ್ಟಿದ್ದು,ರಾಜ್ಯದಲ್ಲಿ ಯಾವುದೇ BPL ಕಾರ್ಡ್ ರದ್ದು ಮಾಡುವುದಿಲ್ಲ ಎಂದು ವಿಧಾನಸೌದದಲ್ಲಿ K H ಮುನಿಯಪ್ಪ  ಹೇಳಿದ್ದಾರೆ.
 
ಯಾರು ಅರ್ಹರಿರುತ್ತಾರೋ ಅವರಿಗೆ ಪರಿಶೀಲನೆ ಮಾಡಿ ಬಿಪಿಎಲ್ ಕಾರ್ಡ್ ಕೊಡಲಿದ್ದೇವೆ.ಮೊದಲು ಕೆಲವರ ಬ್ಯಾಂಕ್ ಖಾತೆ ಇಲ್ಲದ ಕಾರಣ ಪಡಿತರ ಚೀಟಿ ರದ್ದಾಗಿತ್ತು.3 ತಿಂಗಳಲ್ಲಿ ಅರ್ಹರಿಗೆ ಬಿಪಿಎಲ್, ಎಪಿಎಲ್ ಕಾರ್ಡ್ ವಿತರಿಸಲಿದ್ದೇವೆ.ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಪಿಎಲ್ ಕಾರ್ಡ್ ಗೆ 3 ಲಕ್ಷ ಅರ್ಜಿ ಬಂದಿದ್ದವು.ಅರ್ಜಿ ಬಗ್ಗೆ ಪರಿಶೀಲನೆ ಮಾಡಿ ಅನುಮೋದನೆ ನೀಡಲು ಸೂಚನೆ ನೀಡಲಾಗಿದೆ.ಎಲ್ಲವನ್ನೂ ಪರಿಶೀಲಿಸಿಯೇ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ವಿತರಣೆ ಮಾಡಲಿದ್ದೇವೆ.ಎಲ್ಲವನ್ನೂ ಪರಿಶೀಲನೆ ಮಾಡಿ  ವಿತರಣೆ ಮಾಡಲಿದ್ದೇವೆ.ಆಗಸ್ಟ್ 31 ರೊಳಗೆ ಪಡಿತರ ಚೀಟಿದಾರರು ಇ-ಕೆವೈಸಿ ಮಾಡಬೇಕು.ಇಲ್ಲವಾದಲ್ಲಿ ರೇಷನ್ ಕಾರ್ಡ್ ನಲ್ಲಿರುವ ಹೆಸರು ರದ್ದಾಗಲಿವೆ.ನ್ಯಾಯಬೆಲೆ ಅಂಗಡಿಯಲ್ಲಿ ನೀವು ಬ್ಯಾಂಕ್ ಖಾತೆಗೆ ಆಧಾರ್ ಕೂಡ ಲಿಂಕ್ ಮಾಡಿಸಿಕೊಳ್ಳಬಹುದು ಎಂದು -K H ಮುನಿಯಪ್ಪ ಹೇಳಿದ್ದಾರೆ.
 
ಇನ್ನೂ  ಇ-ಕೆವೈಸಿ ಮಾಡಲು ಏನ್ ಏನ್ ಬೇಕು ಅಂತಾ ನೋಡೋದಾದ್ರೆ
 
1)ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್
 
2)ಕುಟುಂಬದ ಸದಸ್ಯರ ಭಾವಚಿತ್ರ
 
3)ಕುಟುಂಬದ ಒಬ್ಬ ಸದಸ್ಯರ ಮೊಬೈಲ್ ಸಂಖ್ಯೆ ಮತ್ತು ಬಯೋಮೆಟ್ರಿಕ್
 
4)ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸುವುದಾದರೆ ಪಾಸ್ ಬುಕ್ ವಿವರ ಬೇಕಾಗುತ್ತದೆ
 
ಇನ್ನೂ E-KYC' ಮಾಡಲು ಆಗಸ್ಟ್ 31 ಕೊನೆಯ ದಿನಾಂಕ ವಾಗಿದೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ