BPL ಕಾರ್ಡ್ ಉಚಿತ ಅನ್ನಭಾಗ್ಯ ರೇಷನ್ ಪಡೀತಿದ್ದವರಿಗೆ ಸರ್ಕಾರದಿಂದ ಶಾಕ್

ಶುಕ್ರವಾರ, 18 ಆಗಸ್ಟ್ 2023 (14:46 IST)
ಆಹಾರ ಇಲಾಖೆಯಿಂದ ಅರ್ಹತೆ ಇಲ್ಲದಿದ್ದರೂ BPL ಕಾರ್ಡ್ ಹೊಂದಿದವರ ಸರ್ವೇ ಮಾಡಲಾಗುತ್ತದೆ.ಆಹಾರ ಇಲಾಖೆಯಿಂದ ಬಿಪಿಎಲ್ ಕಾರ್ಡ್ ಬಳಕೆದಾರರ ಸದ್ಯದ ಆರ್ಥಿಕ ಸ್ಥಿತಿಗತಿ ಬಗ್ಗೆ ಮತ್ತು BPL ಕಾರ್ಡ್ ಪಡೆಯಲು ಇರುವ ಆರು ಮಾನದಂಡದ ಆಧಾರದ ಮೇಲೆ ಸರ್ವೇ ಮಾಡಲಾಗ್ತಿದೆ.ವೈಟ್ ಬೋರ್ಡ್ ಕಾರು, ನಿಗದಿತ ವಾರ್ಷಿಕ ಆದಾಯ, ಸರ್ಕಾರಿ ನೌಕರರು, ನಿಗದಿತ ಜಮೀನು ಹೀಗೆ ಒಟ್ಟು ಆರು ಮಾನದಂಡಗಳ ಆಧಾರದ ಮೇರೆಗೆ ಬಿಪಿಎಲ್ ಕಾರ್ಡ್ ಬಳಕೆದಾರರಿಗೆ ಶಾಕ್ ನೀಡಲಾಗ್ತಿದೆ.
 
ಈ ಹಿಂದೆ ಮಾನದಂಡಗಳ ವ್ಯಾಪ್ತಿಗೆ ಬಂದು ಈಗ ಆರ್ಥಿಕ‌ ಸ್ಥಿತಿ ಸುಧಾರಿಸಿದ್ದರೂ BPL ಕಾರ್ಡ್ ರದ್ದಾಗುತ್ತದೆ.ಈಗಾಗಲೇ ಸರ್ವೇ ನಡೆಸಿ 35 ಸಾವಿರಕ್ಕೂ ಅಧಿಕ BPL ಕಾರ್ಡ್  ಆಹಾರ ಇಲಾಖೆ ರದ್ದು ಮಾಡಿದೆ.ಸಾವನ್ನಪ್ಪಿರುವ ಸುಮಾರು 4.55 ಲಕ್ಷ ಜನರ ಹೆಸರನ್ನ ಅಹಾರ ಇಲಾಖೆ ಅಳಿಸಿದೆ.ಸಾವನ್ನಪ್ಪಿದರ ಹೆಸರನ್ನ‌ ಅಳಿಸಿದರಿಸರ್ಕಾರಕ್ಕೆ  ತಿಂಗಳಿಗೆ 6ರಿಂದ 7 ಕೋಟಿ ಉಳಿತಾಯವಾಗಿದೆ.ರದ್ದು ಮಾಡುವುದುರ ಜೊತೆಗೆ ಮಾನದಂಡ ಉಲ್ಲಂಘಿಸಿದವರಿಂದ ದಂಡ ವಸೂಲಿ ಮಾಡಲಾಗ್ತಿದೆ.ಸರ್ವೇ ನಡೆಸಿ ಅನಧಿಕೃತವಾಗಿ BPL ಕಾರ್ಡ್ ಹೊಂದಿದವರಿಂದ 8 ಕೋಟಿಗೂ ಅಧಿಕ ದಂಡ ವಸೂಲಿ ಮಾಡಲಾಗಿದೆ.ಅನಧಿಕೃತವಾಗಿ BPL ಕಾರ್ಡ್ ಹೊಂದಿರುವವರ ಪೈಕಿ ಸರ್ಕಾರಿ ನೌಕರರು & ವೈಟ್ ಬೋರ್ಡ್ ಕಾರು ಇರುವವರೇ ಹೆಚ್ಚಾಗಿದ್ದುRTO ಮಾಹಿತಿ ಪ್ರಕಾರ ರಾಜ್ಯದಲ್ಲಿ ಒಟ್ಟು 44,62,107 ವೈಟ್ ಬೋರ್ಡ್ ಕಾರುಗಳಿವೆ.ಆದಾಯ ಇಲಾಖೆ, ಸಾರಿಗೆ ಇಲಾಖೆ, ಕಂದಾಯ ಇಲಾಖೆಗೂ ಮಾಹಿತಿ ಕೋರಿ ಆಹಾರ ಇಲಾಖೆ ಮನವಿ ಮಾಡಿದೆ.ಸದ್ಯ ರಾಜ್ಯದಲ್ಲಿ 1 ಕೋಟಿ 28 ಲಕ್ಷ ಮಂದಿ BPL ಕಾರ್ಡ್ ಹೊಂದಿದ್ದು, ಅನ್ನಭಾಗ್ಯದ ಫಲಾನುಭವಿಗಳಾಗಿದ್ದಾರೆ.ಇದೀಗ ಸರ್ವೇ ಶುರು.. ರಾಜ್ಯದಲ್ಲಿ ಸುಮಾರು 35 ಲಕ್ಷಕ್ಕೂ ಹೆಚ್ಚಿನ ಮಂದಿಯ BPL ಕಾರ್ಡ್ ರದ್ದು ಸಾಧ್ಯತೆ ಇದೆ ಎಂದು ಆಹಾರ ಇಲಾಖೆ ಎಂ ಡಿ ಗ್ಯಾನೇಂದ್ರ ಹೇಳಿದ್ದಾರೆ.
 
BPL ಕಾರ್ಡ್ ಮಾನದಂಡ ಏನು.!?
 
• ವಾರ್ಷಿಕ ಆದಾಯ 1.2 ಲಕ್ಷ ಮೀರಬಾರದು
• 3 ಹೆಕ್ಟರ್‌ಗಿಂತ ಹೆಚ್ಚಿನ ಒಣಭೂಮಿ ಹೊಂದಿರಬಾರದು
• ವೈಟ್ ಬೋರ್ಡ್ ನಾಲ್ಕು ಚಕ್ರದ ವಾಹನ ಇರಬಾರದು
• ಯಾವುದೇ ಸರ್ಕಾರಿ ನೌಕರರಾಗಿರಬಾರದು
• ನಗರದ ಭಾಗದಲ್ಲಿ ಮನೆಯ ವಿಸ್ತೀರ್ಣ 1000 sqt ಮೀರಬಾರದು
• ವಾಣಿಜ್ಯ ತೆರಿಗೆ, ಆದಾಯ ತೆರಿಗೆ, IT ರಿಟರ್ನ್ಸ್ ಪಾವತಿದಾರರು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ