ಕೊರೊನಾ ಎಫೆಕ್ಟ್: ಮಾರುಕಟ್ಟೆಗಳಲ್ಲಿ ಸಿಗ್ತಿಲ್ಲ ತರಹೇವಾರಿ ರಾಖಿಗಳು!

ಭಾನುವಾರ, 22 ಆಗಸ್ಟ್ 2021 (16:40 IST)
ಸಹೋದರರ ಸಂಬಂಧವನ್ನು ಮತ್ತಷ್ಟು ಗಟ್ಟಿ ಮಾಡುವ ನಿಸ್ವಾರ್ಥ ಸಂಬಂಧದ ಪ್ರತೀಕವೇ ರಾಖಿ ಹಬ್ಬ. ಇಂದು ನಾಡಿನಾದ್ಯಂತ ರಾಖಿ ಹಬ್ಬದ ಸಂಭ್ರಮ. ಕರೊನಾದ ಛಾಯೆ ಹಿನ್ನಲೆ, ನಗರದಲ್ಲಿ ಅಷ್ಟೊಂದು ಅದ್ದೂರಿಯಾಗಿ ಹಬ್ಬವನ್ನು ಆಚರಣೆ ಮಾಡಲಿಲ್ಲ. ಪ್ರತಿವರ್ಷದಂತೆ ವೆರೈಟಿ ರಾಖಿಗಳು ಸಹ ಮಾರ್ಕೆಟ್ ಗಳಲ್ಲಿ ಇಲ್ಲ.
ರಕ್ಷಾ ಬಂಧನ ಹೆಣ್ಣು ಮಕ್ಕಳಿಗೆ ತವರಿನ ನಂಟು ಭದ್ರ‍ಪಡಿಸುವ ಹಬ್ಬ. ಜತೆಗೆ ಇದು ಭ್ರಾತೃತ್ವದ ಭಾವ ಬೆಸೆಯುವ ಸೇತುವೆ.
ಪ್ರತಿವರ್ಷ ನೂಲು ಹುಣ್ಣಿಮೆ ದಿನ ರಾಖಿ ಹಬ್ಬವನ್ನು ಅದ್ದೂರಿಯಾಗಿ, ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತೆ. ಆದ್ರೆ ಕಳೆದ ಎರಡು ವರ್ಷದಿಂದ ಸರಿಯಾಗಿ ಹಬ್ಬವನ್ನೇ ಆಚರಣೆ ಮಾಡೋಕೆ ಆಗ್ತಾ ಇಲ್ಲ. ಯಾಕಂದ್ರೆ, ಕರೊನಾದ ಕರಿನೆರಳು ಎಲ್ಲ ಹಬ್ಬಗಳ ಮೇಲೆ‌ಬಿದ್ದಿದ್ದು, ಜನರ ಮನೆಯಿಂದ ಹೊರಬರದಂತಹ ಪರಿಸ್ಥಿತಿ ಬಂದೊದಗಿದೆ. ವ್ಯಾಪಾರ-ವಹಿವಾಟು ಇಲ್ಲದೇ, ರಾಖಿ ಕೊಳ್ಳುವವರ ಸಂಖ್ಯೆಯೂ ಕಡಿಮೆಯಾಗಿದ್ದು, ವ್ಯಾಪಾರಿಗಳು ಸಹ ಕಂಗಾಲಾಗಿದ್ದಾರೆ.
ಪ್ರತಿವರ್ಷ ಮಾರುಕಟ್ಟೆಗಳಿಗೆ ವೆರೈಟಿ, ವೆರೈಟಿ ರಾಖಿಗಳು
ಬರ್ತಾ ಇದ್ವು.‌ ಆದರೆ, ಎರಡು ವರ್ಷದಿಂದ ಕರೊನಾ ಇರೋ ಹಿನ್ನಲೆ, ವ್ಯಾಪಾರವಹಿವಾಟುಗಳು ಸರಿಯಾಗಿ ನಡೆದಿಲ್ಲ. ಕಳೆದ ವರ್ಷದ ರಾಖಿಗಳು ಇದೂವರೆಗೂ ಸೇಲ್ ಆಗಿಲ್ಲ. ಇನ್ನು ಈ ವರ್ಷ ಯಾವುದರ ಆಧಾರದ ಮೇಲೆ ರಾಖಿ ತರೋದು ಅಂತಾ ವ್ಯಾಪಾರಿಗಳು ಸುಮ್ಮನಾಗಿದ್ದಾರೆ. ಇದ್ರಿಂದ ಮಾರ್ಕೆಟ್ ಗಳಲ್ಲಿ ಸರಿಯಾಗಿ  ವಿಧವಿಧವಾದ ರಾಖಿಗಳು ಸಿಗ್ತಾ ಇಲ್ಲ.‌ ರಕ್ಷಣೆ ಮಾಡುವ ಪ್ರತಿಯೊಬ್ಬ ಪುರುಷನಿಗೆ ಸ್ತ್ರೀಯರು ನೂಲಿನ ರೂಪದಲ್ಲಿ ದಾರ, ರಾಖಿ ಕಟ್ಟುವುದು ಸಂಪ್ರದಾಯ. ಹೀಗಾಗೀ ಕರೊನಾದ ನಡುವೆ ಸರಳವಾಗಿ ರಾಖಿ ಹಬ್ಬ ಆಚರಿಸಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ