ಉತ್ತರ ಪ್ರದೇಶದಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳು ಹೆತ್ತರೆ ಈ ಸೌಲಭ್ಯ ಸಿಗಲ್ಲ!

ಶನಿವಾರ, 10 ಜುಲೈ 2021 (19:24 IST)
ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದವರಿಗೆ ಸರಕಾರಿ ಉದ್ಯೋಗ ನೀಡದೇ ಇರುವ ಜನಸಂಖ್ಯೆ ಮಸೂದೆಯನ್ನು ಉತ್ತರ ಪ್ರದೇಶ ಸರಕಾರ ಮಂಡಿಸಲಿದೆ.
ಉತ್ತರ ಪ್ರದೇಶ ಸರಕಾರ ಹೊಸದಾಗಿ ಜಾರಿಗೆ ತರಲು ಉದ್ದೇಶಿಸಿರುವ ಜನಸಂಖ್ಯೆ ನಿಯಂತ್ರಣ ಮಸೂದೆ ಪ್ರಕಾರ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದರೆ ಅಂತಹವರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಒಂದು ವೇಳೆ ಸರಕಾರಿ ಉದ್ಯೋಗದಲ್ಲಿದ್ದರೆ ಅವರಿಗೆ ಬಡ್ತಿ ನೀಡುವಂತಿಲ್ಲ.
ಉತ್ತರ ಪ್ರದೇಶ ಕಾನೂನು ಆಯೋಗ ಈ ಮಸೂದೆಯನ್ನು ಸಿದ್ಧಪಡಿಸಿದ್ದು, ಜುಲೈ 19ರವರೆಗೆ ಸಾರ್ವಜನಿಕರ ಅಭಿಪ್ರಾಯವನ್ನು ಆಹ್ವಾನಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ