ನ್ಯಾಯ ಒದಗಿಸಲು ಸರ್ಕಾರಕ್ಕೆ ಆಗುವುದಿಲ್ಲ -ಅಶ್ವಿನಿ (ಕೊಲೆಯಾದ ಹರ್ಷ ಅಕ್ಕ)

ಗುರುವಾರ, 7 ಜುಲೈ 2022 (16:22 IST)
ಶಿವಮೊಗ್ಗದಲ್ಲಿ ಫೆಬ್ರವರಿಯಲ್ಲಿ ಕೊಲೆಯಾಗಿದ್ದ ಹರ್ಷ ಸಹೋದರಿ ಅಶ್ವಿನಿ ಜತೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಜೋರಾಗಿ ಮಾತನಾಡಿ ಕಳುಹಿಸಿದ ಘಟನೆ ಬೆಂಗಳೂರು ಮಲ್ಲೇಶ್ವರಂ ನ ಬಿಜೆಪಿ ಕಚೇರಿಯಲ್ಲಿ ನಡೆದಿದೆ.
 
ಪರಪ್ಪನ ಅಗ್ರಹಾರ ಜೈಲಿನಲ್ಲಿ ಆರೋಪಿಗಳಿಗೆ ನಡೆಯುತ್ತಿರುವ ರಾಜಾಥಿತ್ಯದ ಬಗ್ಗೆ ಅಶ್ವಿನಿ ಅವರು ದೂರು ನೀಡಲು ಹೋಗಿದ್ದ ವೇಳೆ ಘಟನೆ ನಡೆದಿದೆ.
ನ್ಯಾಯ ಕೇಳಲು ಹೋದ ಅಶ್ವಿನಿ ಜತೆ ಗೃಹ ಸಚಿವರು ಜೋರಾಗಿ ಮಾತನಾಡಿದ್ದಾರೆ.
 
ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡುವಂತೆ ಅಶ್ವಿನಿ ಕೇಳಿಕೊಂಡಿದ್ದು,ಆದರೆ ಅಶ್ವಿನಿ ಅವರೊಂದಿಗೆ ಜೋರಾಗಿ ಮಾತನಾಡಿ ಕಳುಹಿಸಲಾಗಿದೆ.
 
ಮಾತನಾಡಲು ಸಮಯ ಕೇಳಿದ್ದೆ ತಪ್ಪಾಯಿತು.ಸರ್ಕಾರದ ಮೇಲೆ ನಂಬಿಕೆ ಹೊರಟು ಹೊಯಿತು. ನ್ಯಾಯ ಸಿಗುವ ನಂಬಿಕೆಯನ್ನೇ ಕಳೆದುಕೊಂಡಿದ್ದೇನೆ ಎಂದು ಎಂದು ಅಶ್ವಿನಿ ಹೊರ ನಡೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ