ಬಾಲಕಿಯರ ಎದುರು ಗುಪ್ತಾಂಗ ಪ್ರದರ್ಶಿಸಿದ್ದಕ್ಕೆ ಅರೆಸ್ಟ್ ಆದ ಮಲಯಾಳಂ ನಟ ಶ್ರೀಜಿತ್
ಜುಲೈ 4 ರಂದು ಘಟನೆ ನಡೆದಿತ್ತು. ಈ ಸಂಬಂಧ ದೂರು ನೀಡಲಾಗಿತ್ತು. ಅದರಂತೆ ಶ್ರೀಜಿತ್ ರನ್ನು ಬಂಧಿಸಲಾಗಿದೆ. ತಮ್ಮ ಕಾರಿನ ಬಳಿ ಇಬ್ಬರು ಅಪ್ರಾಪ್ತ ಬಾಲಕಿಯರು ಬರುತ್ತಿದ್ದಾಗ ಬಳಿ ಹೋದ ಶ್ರೀಜಿತ್ ಅವರ ಎದುರು ಗುಪ್ತಾಂಗ ಪ್ರದರ್ಶಿಸಿ ಅಶ್ಲೀಲ ವರ್ತನೆ ತೋರಿದ್ದರು.
ಪೊಲೀಸ್ ವಿಚಾರಣೆ ವೇಳೆ ಶ್ರೀಜಿತ್ ತಪ್ಪೊಪ್ಪಿಕೊಂಡಿದ್ದು ತನಗೆ ಮಾನಸಿಕ ಸಮಸ್ಯೆಯಿದ್ದು, ಇದರಿಂದಾಗಿ ಈ ರೀತಿ ನಡೆದುಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಶ್ರೀಜಿತ್ ಮಲಯಾಳಂ ಹಿರಿಯ ನಟ ಟಿಜಿ ರವಿ ಪುತ್ರನಾಗಿದ್ದು, ಈ ಘಟನೆ ಅವರ ಕುಟುಂಬಕ್ಕೆ, ಚಿತ್ರರಂಗಕ್ಕೆ ತೀವ್ರ ಮುಜುಗರ ತಂದಿದೆ.