ಕಾಲೇಜಿನಲ್ಲಿ ಹಿಜಬ್, ಕೇಸರಿ ಶಾಲು ಅವಕಾಶ ಇಲ್ಲ: ನಾಗೇಶ್

ಮಂಗಳವಾರ, 8 ಫೆಬ್ರವರಿ 2022 (15:13 IST)
ಬೆಂಗಳೂರು : ಇಂದು ಹೈಕೋರ್ಟ್ಗೆ ನಮ್ಮ ಕ್ರಮಗಳ ಬಗ್ಗೆ ಎಜಿ ತಿಳಿಸಿದ್ದಾರೆ. ಹಿಜಾಬ್ ಪ್ರಕರಣದ ಹಿಂದೆ ಬೇರೆ ಶಕ್ತಿಗಳು ಕೆಲಸ ಮಾಡುತ್ತಿದೆ.

ಈ ಕುರಿತು ಪೊಲೀಸ್ ಇಲಾಖೆ ಮೂಲಕ ತನಿಖೆ ಮಾಡಲಾಗುತ್ತದೆ. ವಿದ್ಯಾರ್ಥಿಗಳು ಕಾಲೇಜು ನಿಯಮ ಪಾಲನೆ ಮಾಡಿದ್ರೆ ಮಾತ್ರ ಕಾಲೇಜಿಗೆ ಎಂಟ್ರಿ ಇಲ್ಲ ಅಂದ್ರೆ ಯಾವುದೇ ಕಾರಣಕ್ಕೂ ಎಂಟ್ರಿ ಇಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಖಡಕ್ ಆಗಿ ಎಚ್ಚರಿಕೆ ನೀಡಿದ್ದಾರೆ.

ಕೋರ್ಟ್ಗೆ ಎಲ್ಲರೂ ಒಂದೇ ಎಂಬ ಮನಸ್ಥಿತಿ, ಶಿಕ್ಷಣ ಇಲಾಖೆಯ ಸಮಾನತೆಯ ರೂಲ್ಸ್ ಎಲ್ಲವನ್ನೂ ನಾವು ಸ್ಪಷ್ಟಪಡಿಸುತ್ತೇವೆ. ಈ ನಿಯಮಗಳನ್ನು ಎಲ್ಲರೂ ಪಾಲನೆ ಮಾಡಿದರೆ ಮಾತ್ರ ವಿದ್ಯಾರ್ಥಿಗಳು ಕಾಲೇಜಿಗೆ ಬರಲಿ ಇಲ್ಲದೆ ಹೋದ್ರೆ ಕಾಲೇಜಿಗೆ ಎಂಟ್ರಿ ಇಲ್ಲ.

ಕೋರ್ಟ್ಗೆ ಇವತ್ತು ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡ್ತೀವಿ. 14 ಲಕ್ಷ ಮಕ್ಕಳ ಪೈಕಿ 29 ಮಕ್ಕಳಿಂದ ವ್ಯವಸ್ಥೆ ಹಾಳಾಗಲು ನಾವು ಬಿಡುವುದಿಲ್ಲ. ಸರ್ಕಾರ ವ್ಯವಸ್ಥೆ ಹಾಳು ಮಾಡೋದಕ್ಕೆ ಅವಕಾಶ ಕೊಡುವುದಿಲ್ಲ. ಈ ವಿವಾದದ ಹಿಂದೆ ಕೆಲ ಸಂಘಟನೆಗಳು ಕೆಲಸ ಮಾಡುತ್ತೀವೆ.

ಈ ಬಗ್ಗೆ ಪೊಲೀಸ್ ತನಿಖೆ ಮಾಡಿಸ್ತೀವಿ. ಸಂವಿಧಾನದ ಬಗ್ಗೆ ಮಾತಾಡೋರು ಮೊದಲು ಸಂವಿಧಾನ ಓದಲಿ. ಸರ್ಕಾರದ ನಿಯಮಗಳನ್ನು ವಿದ್ಯಾರ್ಥಿಗಳು ಪಾಲನೆ ಮಾಡಲೇಬೇಕು ಎಂದು ತಿಳಿ ಹೇಳಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ