ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ಪ್ರಿಯಾಂಕ ಖರ್ಗೆಯವರ ನೋಟಿಸಿಗೆ ನಾನು ಯಾವುದೇ ಪ್ರಾಮುಖ್ಯತೆ ಕೊಟ್ಟಿಲ್ಲ. ಇಲ್ಲಿನವರೆಗೆ ಅವರ ನೋಟಿಸ್ ಮೇಲೆ ಏನೇ ಕ್ರಮ ತೆಗೆದುಕೊಳ್ಳಲು ಅವರಿಗೆ ಆಗಿಲ್ಲವೆಂದಾದರೆ ಆ ನೋಟಿಸಿಗೆ ಮೌಲ್ಯವಿಲ್ಲ ಎಂದು ಅವರೇ ಒಪ್ಪಿಕೊಂಡಂತಾಗಿದೆ ಎಂದು ವಿಶ್ಲೇಷಿಸಿದರು.
ಇನ್ನು ಸಚಿನ್ ಡೆತ್ ನೋಟ್ ನಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿಲ್ಲ ಎಂದ ಕಾಂಗ್ರೆಸ್ ನಾಯಕರಿಗೆ ಬಿಜೆಪಿ ಡೆತ್ ನೋಟ್ ಪ್ರಕಟಿಸಿ ತಿರುಗೇಟು ನೀಡಿದೆ. ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ, ಲೋಕಸಭಾ ವಿರೋಧ ಪಕ್ಷದ ನಾಯಕರಾದ ಶ್ರೀ ರಾಹುಲ್ ಗಾಂಧಿ, ಕರ್ನಾಟಕ ರಾಜ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಗಳಾದ ಶ್ರೀ ಡಿಕೆ ಶಿವಕುಮಾರ್ ಹಾಗೂ ಸಚಿವ ಪ್ರಿಯಾಂಕ ಖರ್ಗೆ ಆತ್ಮಹತ್ಯೆ ಮಾಡಿಕೊಂಡ ಸಚಿನ್ ಪಾಂಚಾಳ್ ಬರೆದ ಡೆತ್ ನೋಟ್ ನಲ್ಲಿ ಸಚಿವ ಶ್ರೀ ಪ್ರಿಯಾಂಕ ಖರ್ಗೆ ಹೆಸರು ಇಲ್ಲ ಎನ್ನುತ್ತಿದ್ದಾರೆ. ಈ ಡೆತ್ ನೋಟ್ ತಮಗೆ ತಲುಪಿಲ್ಲ ಅನಿಸುತ್ತದೆ. ಆದ್ದರಿಂದ ಅಂಚೆ ಮೂಲಕ ತಮಗೆ ಈ ಡೆತ್ ನೋಟ್ ತಲುಪಿಸುತ್ತಿದ್ದೇವೆ. ದಯವಿಟ್ಟು ತಕ್ಷಣ ಇದನ್ನು ಓದಿ ಪ್ರಿಯಾಂಕ್ ಖರ್ಗೆರವರ ರಾಜೀನಾಮೆ ಪಡೆಯಿರಿ ಎಂದು ಆಗ್ರಹಿಸಿದೆ.