ಒತ್ತುವರಿ ತೆರವಿಗೆ ನೋಟಿಸ್ ಕೊಡುವ ಅಗತ್ಯವಿಲ್ಲ : ಅಶೋಕ್

ಸೋಮವಾರ, 12 ಸೆಪ್ಟಂಬರ್ 2022 (14:50 IST)
ಬೆಂಗಳೂರು : ಕೆರೆ, ರಾಜಾಕಾಲುವೆ ಒತ್ತುವರಿ ತೆರವಿಗೆ ನೋಟಿಸ್ ಕೊಡುವ ಅಗತ್ಯ ಇಲ್ಲ, ನೋಟಿಸ್ ಕೊಡದೆಯೇ ತೆರವು ಮಾಡಬಹುದು ಎಂದು ಸಚಿವ ಆರ್. ಅಶೋಕ್ ಹೇಳಿದ್ದಾರೆ.

ಮಹಾದೇವಪುರ, ಬೊಮ್ಮನಹಳ್ಳಿ ವಲಯದಲ್ಲಿ ರಾಜಕಾಲುವೆ ಒತ್ತುವರಿ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆರೆ, ರಾಜಾಕಾಲುವೆ  ಒತ್ತುವರಿ ತೆರವಿಗೆ ನೋಟಿಸ್ ಕೊಡುವ ಅಗತ್ಯವಿಲ್ಲ, ಕೊಡದೇ ತೆರವು ಮಾಡಬಹುದು ಎಂದಿದ್ದಾರೆ. 

ಯಾರೇ ಒತ್ತುವರಿ ಮಾಡಿದ್ರೂ ಕಾನೂನು ಪ್ರಕಾರ ಕ್ರಮ ಆಗುತ್ತೆ. ಬಡವರು, ಸಾಹುಕಾರರು ಅಂತ ನೋಡದೇ ಒತ್ತುವರಿ ತೆರವು ನಿರಂತರವಾಗಿ ಮಾಡ್ತೇವೆ.

ಅಧಿಕಾರಿಗಳು ತಾರತಮ್ಯ ಮಾಡದೇ ಕ್ರಮ ಕೈಗೊಳ್ಳಬೇಕು. ಒಂದು ವಾರ ತೆರವು ಮಾಡಿ ನಂತರ ಸುಮ್ಮನಾಗಬಾರದು, ತೆರವು ಕಾರ್ಯ ನಿರಂತರ ಮಾಡಿ ಅಂತ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ