ಭಿನ್ನಮತೀಯ ಶಾಸಕರ ಸಂಧಾನ ಕಥೆ ಮುಗಿದ ಅಧ್ಯಾಯ: ಕುಮಾರಸ್ವಾಮಿ

ಶುಕ್ರವಾರ, 10 ಜೂನ್ 2016 (11:53 IST)
ಭಿನ್ನಮತೀಯ ಶಾಸಕರ ಸಂಧಾನ ಕಥೆ ಮುಗಿದ ಅಧ್ಯಾಯ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
 
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಭಿನ್ನಮತೀಯ ಶಾಸಕರ ಸಂಧಾನ ಕಥೆ ಮುಗಿದ ಅಧ್ಯಾಯ. ಈ ಕುರಿತು ಚರ್ಚೆ ನಡೆಸುವುದಿಲ್ಲ. ರಾಜ್ಯಸಭೆ ಚುನಾವಣೆಯಲ್ಲಿ ಒಂದು ಸ್ಥಾನದಲ್ಲಿ ನಮ್ಮ ಅಭ್ಯರ್ಥಿ ಜಯಭೇರಿ ಖಚಿತ ಎಂದು ಹೇಳಿದ್ದಾರೆ.
 
ನಿನ್ನೆ ನಡೆದ ಜೆಡಿಎಲ್‌ಪಿ ಸಭೆಯಲ್ಲಿ ಶಾಸಕ ಎಚ್.ಸಿ.ಬಾಲಕೃಷ್ಣ ಮತ್ತು ನನ್ನ ಮಧ್ಯ ಮಾತಿನ ಚಕಮಕಿ ನಡೆದಿಲ್ಲ. ಅವರು ನಿನ್ನೆ ರಾತ್ರಿ ನನ್ನನ್ನು ಮಾತುಕತೆಗೆ ಕರೆದಿದ್ದರು. ಆದರೆ, ಸಂಧಾನ ಯತ್ನ ವಿಫಲವಾಗಿದೆ ಎಂದು ಹೇಳಿದರು.
 
ಪಕ್ಷದ ನಾಲ್ಕೈದು ಶಾಸಕರು ಕೈಗೆ ಸಿಗದೆ ಒಡಾಡುತ್ತಿದ್ದಾರೆ. ಹೀಗಾಗಿ ಅವರ ಜೊತೆ ಮಾತನಾಡಲು ಸಾಧ್ಯವಾಗಿಲ್ಲವೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
 

ವೆಬ್ದುನಿಯಾವನ್ನು ಓದಿ