ಕೈಯಲ್ಲಿ ಗುದ್ದಲಿ ಹಿಡಿದು ಓಡಾಡಿದರೆ ಜನ ಮತ ಹಾಕ್ತಾರೇನ್ರಿ?: ಸಿಎಂಗೆ ಪ್ರಸಾದ್ ತಿರುಗೇಟು

ಸೋಮವಾರ, 26 ಡಿಸೆಂಬರ್ 2016 (14:27 IST)
ನಂಜನಗೂಡಿನ ಮೇಲೆ ಸಿಎಂ ಹಾಗೂ ಸಚಿವರ ಧೃತರಾಷ್ಟ್ರ ಆಲಿಂಗನ. ಕೈಯಲ್ಲಿ ಗುದ್ದಲಿ ಹಿಡಿದು ಓಡಾಡಿದರೆ ಜನ ಮತ ಹಾಕ್ತಾರೇನ್ರಿ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಪ್ರಶ್ನಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಂಜನಕೂಡಿನ ಜನತೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸ್ಪಂಧಿಸುತ್ತಿಲ್ಲ. ಹೀಗಾಗಿ ಅವರಿಗೆ ನಂಜನಕೂಡಿನ ಮೇಲೆ ತುಂಬಾ ಕೋಪ ಎಂದು ದೂರಿದರು. 
 
ರಾಜ್ಯ ಕಾಂಗ್ರೆಸ್ ನಾಯಕರು ನೈತಿಕವಾಗಿ ದಿವಾಳಿಯಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹತಾಶರಾಗಿದ್ದಾರೆ ಎಂದು ಲೇವಡಿ ಮಾಡಿದರು. 
 
ನಂಜನಗೂಡು ಉಪಾಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಬಳಿ ಅಭ್ಯರ್ಥಿಯೇ ಇಲ್ಲ. ಜಾಮೀನಿನ ಮೇಲೆ ಹೊರಗಿರುವವರಿಗೆ ಟಿಕೆಟ್ ನೀಡಲು ಸಿಎಂ ಸಿದ್ದರಾಮಯ್ಯ ಓಡಾಡುತ್ತಿದ್ದಾರೆ ಎಂದು ಸಚಿವ ಮಹದೇವಪ್ಪ ಹಾಗೂ ಅವರ ಪುತ್ರ ಸುನೀಲ್ ಭೋಸ್‌ಗೆ ಟಾಂಗ್ ನೀಡಿದ್ದಾರೆ. 
 
ವಿಶ್ವಗುರು ಬಸವಣ್ಣ ಹಾಗೂ ಡಾ. ಅಂಬೇಡ್ಕರ್ ತತ್ವಗಳನ್ನು ಗಾಳಿಗೆ ತೂರಿ ಬಿಜೆಪಿ ಸೇರುತ್ತಿದ್ದಾರೆ ಎಂಬ ಸಿಎಂ ಸಿದ್ದರಾಮಯ್ಯರ ಹೇಳಿಕೆಗೆ ನಾಳೆ ತಕ್ಕ ಉತ್ತರ ನೀಡುತ್ತೇನೆ ಎಂದು ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ತಿರುಗೇಟು ನೀಡಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ