ಲೋ ಬಿಪಿಯಿಂದ ಹೃದಯಾಘಾತವಾಗುವುದು ನಿಜಾನಾ: ಡಾ ಸಿಎನ್ ಮಂಜುನಾಥ್ ಹೇಳುವುದೇನು
ಸಂದರ್ಶನವೊಂದರಲ್ಲಿ ಅವರು ಈ ಬಗ್ಗೆ ಸಾಮಾನ್ಯರ ತಪ್ಪು ಕಲ್ಪನೆಯನ್ನು ನಿವಾರಿಸಿದ್ದಾರೆ. ಲೋ ಬಿಪಿ ಇದ್ದವರಿಗೆಲ್ಲಾ ಹೃದಯಾಘಾತವಾಗುತ್ತದೆ ಎಂಬ ಕಲ್ಪನೆ ಅನೇಕರದಲ್ಲಿದೆ. ಆದರೆ ಇದು ತಪ್ಪು ಕಲ್ಪನೆ. ಲೋ ಬಿಪಿ ಇದ್ದವರಿಗೆಲ್ಲಾ ಹೃದಯಾಘಾತದ ಅಪಾಯ ಹೆಚ್ಚು ಎಂದೇನಿಲ್ಲ.
ಲೋ ಬಿಪಿ ಆದಾಗ ಹೃದಯಾಘಾತವಾಗಲ್ಲ. ಹೃದಯಾಘಾತವಾದಾಗ ಲೋ ಬಿಪಿ ಆಗುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದರು. ಲೋ ಬಿಪಿ ಆದಾಗ ಕಣ್ಣು ಕತ್ತಲೆಯಾದಂತೆ, ತಲೆ ಚಕ್ಕರ್ ಬಂದಂತೆ ಎನಿಸಬಹುದು.
ಆದರೆ ಲೋ ಬಿಪಿಯಿಂದಲೇ ಹೃದಯಾಘಾತವಾಗುವ ಸಾಧ್ಯತೆಯಿಲ್ಲ. ಹೃದಯಾಘಾತಕ್ಕೆ ಅದರದ್ದೇ ಆಗ ಕಾರಣಗಳಿವೆ ಎಂದು ಅವರು ಹೇಳುತ್ತಾರೆ.