ಜೂನ್ 16ರ ನಂತರ ದೇಶದಾದ್ಯಂತ ನಿತ್ಯ ತೈಲ ಬೆಲೆ ಪರಿಷ್ಕರಣೆ ಮಾಡುವ ಯೋಜನೆ ಜಾರಿಗೊಳಿಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಇದರಿಂದ ಪೆಟ್ರೋಲ್ ಬಂಕ್ ಮಾಲೀಕರಿಗೆ ತೊಂದರೆಯಾಗಲಿದೆ. ನಿತ್ಯವೂ ಮಧ್ಯರಾತ್ರಿ 12ಕ್ಕೆ ಮಾಲೀಕರೇ ಬಂಕ್‌ಗೆ ಬಂದು ಪರಿಷ್ಕೃತ ದರ ನಮೂದಿಸಬೇಕು. ಸ್ವಲ್ಪ ಹೆಚ್ಚುಕಡಿಮೆಯಾದರೆ 5 ಲಕ್ಷ ದಂಡ ತೆರಬೇಕಾಗುತ್ತದೆ. ಅಲ್ಲದೇ ರಾತ್ರಿ 8ಕ್ಕೆ ಮೊಬೈಲ್ ಅಥವಾ ವೆಬ್‌ಸೈಟ್‌ನಲ್ಲಿ ಪರಿಷ್ಕೃತ ದರ ಪ್ರಕಟಿಸುವುದಾಗಿ ಸರ್ಕಾರ ಹೇಳಿದೆ. ಆದರೆ, ಮೊಬೈಲ್, ಇಂಟರ್‌ನೆಟ್ ಸೇವೆ ಇಲ್ಲದ ಗ್ರಾಮೀಣ ಪ್ರದೇಶಗಳಿಗೆ ನಿತ್ಯವೂ ದರ ಹೇಗೆ ತಲುಪುತ್ತದೆ. ಬೆಲೆ ಹೆಚ್ಚುಕಡಿಮೆಯಾಗುತ್ತಿದ್ದರೆ ಗ್ರಾಹಕರು ಗೊಂದಲಕ್ಕೆ ಸಿಲುಕಲಿದ್ದಾರೆ ಎಂದು ತಿಳಿಸಿದ್ದಾರೆ.