ಡಿಐಜಿ ರೂಪಾಗೆ ವರ್ಗಾವಣೆ ಶಿಕ್ಷೆ ಅಲ್ಲ: ಆರ್.ಕೆ.ದತ್ತಾ

ಮಂಗಳವಾರ, 18 ಜುಲೈ 2017 (14:40 IST)
ಡಿಐಜಿಯಾಗಿದ್ದ ರೂಪಾ ಅವರಿಗೆ ವರ್ಗಾವಣೆ ಶಿಕ್ಷೆ ನೀಡಿಲ್ಲ ಎಂದು ಪೊಲೀಸ್ ಮಹಾನಿರ್ದೇಶಕ ಆರ್.ಕೆ.ದತ್ತಾ ಸ್ಪಷ್ಟನೆ ನೀಡಿದ್ದಾರೆ.
 
ಸಂಚಾರ ಮತ್ತು ರಸ್ತೆ ಸುರಕ್ಷತೆ ಇಲಾಖೆ ಕೂಡಾ ತುಂಬಾ ಮುಖ್ಯವಾದುದ್ದು. ರಸ್ತೆ ಅಪಘಾತಗಳನ್ನು ಕಡಿಮೆಗೊಳಿಸುವ ಜವಾಬ್ದಾರಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
 
ಸಂಚಾರ ಮತ್ತು ರಸ್ತೆ ಸುರಕ್ಷತೆ ಇಲಾಖೆ, ಪೊಲೀಸ್ ಇಲಾಖೆಯಲ್ಲಿಯೇ ದೊಡ್ಡ ಹೊಣೆಯನ್ನು ಹೊತ್ತ ಇಲಾಖೆಯಾಗಿದೆ ಎಂದು ಹೇಳಿದ್ದಾರೆ.     
 
ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಶಿಕಲಾ ಮತ್ತು ತೆಲಗಗೆ ವಿಐಪಿ ಆತಿಥ್ಯ ನೀಡಲಾಗುತ್ತಿದೆ ಎಂದು ಡಿಐಜಿ ರೂಪಾ ಸರಕಾರಕ್ಕೆ ಮತ್ತು ಡಿಜಿ(ಕಾರಾಗೃಹ)ಸತ್ಯನಾರಾಯಣ್ ರಾವ್ ಅವರಿಗೆ ವರದಿ ಸಲ್ಲಿಸಿದ ನಂತರ ಡಿಐಜಿ ಮತ್ತು ಡಿಜಿಪಿ ಮಧ್ಯೆ ಬಿಕ್ಕಟ್ಟು ಉಲ್ಬಣಿಸಿತ್ತು.
 
ಕಾರಾಗೃಹದ ಅಧಿಕಾರಿಗಳು ಎರಡು ಲಕ್ಷ ರೂಪಾಯಿ ಲಂಚ ಪಡೆದು ಶಶಿಕಲಾ ಮತ್ತು ತೆಲಗಿಗೆ ವಿಐಪಿ ಆತಿಥ್ಯ ನೀಡಿದ್ದಾರೆ ಎಂದು ಡಿಐಜಿ ರೂಪಾ ಸರಕಾರಕ್ಕೆ ವರದಿ ಸಲ್ಲಿಸಿದ್ದರು.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ