ನಾಳೆಯಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೇ ಅರಂಭ ,!

ಬುಧವಾರ, 12 ಏಪ್ರಿಲ್ 2023 (19:22 IST)
ರಾಜ್ಯದಲ್ಲಿ ಈಗ ಬೇಸಿಗೆಯ ಕಾವು ಮಾತ್ರ ಹೆಚ್ಚಾಗ್ತಿಲ್ಲ. ಚುನಾವಣಾ ಕಾವು ಬೇಸಿಗೆಯನ್ನೇ ಓವರ್‌ಟೇಕ್ ಮಾಡುವಷ್ಟು ಹೆಚ್ಚಾಗಿದೆ. ಹವಾಮಾನಕ್ಕೆ ತಕ್ಕಂತೆ ಸ್ಥಳ ಬದಲಿಸೋ ಪಕ್ಷಿಗಳಂತೆ, ಅಧಿಕಾರಕ್ಕಾಗಿ ಪಕ್ಷ ಬದಲಿಸೋ ರಾಜಕಾರಣಿಗಳ ಚದುರಂಗದಾಟವೂ ಆರಂಭವಾಗಿದೆ. ಅವರು ಹೇಳಿದ್ದೇ ಫೈನಲ್ ಎಂದುಕೊಂಡಿದ್ದ ರಾಜಕೀಯ ನಿಪುಣರ ಲೆಕ್ಕಾಚಾರ ಈಗಾಗಲೇ ತಲೆಕೆಳಗಾಗುತ್ತಿದೆ. ಇದೆಲ್ಲದರ ಮಧ್ಯ ಚುನಾವಣಾ ಆಯೋಗ ನಾಳೆಯಿಂದ ನಾಮಪತ್ರ ಸಲ್ಲಿಕೆಗೆ  ಬೇಕಿರೋ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ. 

ಕೆಲವೇ ದಿನಗಳಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದೆ. ನಾಳೆಯಿಂದ 7 ದಿನಗಳ ಕಾಲ ಅಂದ್ರೆ ಏಪ್ರಿಲ್ 13 ರಿಂದ 20 ರವರೆಗೂ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ನಾಮಪತ್ರ ಸಲ್ಲಿಕೆಗೆ ಬೇಕಿರೋ ರಿಟರ್ನಿಂಗ್ ಆಫೀಸ್‌ಗಳನ್ನೂ ಈಗಾಗಲೇ ಚುನಾವಣಾ ಆಯೋಗ ಸ್ಥಾಪಿಸಿದೆ. ನಗರದ 28 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಆರ್‌ಓ ಆಫೀಸ್‌ಗಳನ್ನು ನಿರ್ಮಿಸಲಾಗಿದ್ದು, ನಾಳೆಯಿಂದ ಮತ್ತೊಂದು ಹಂತದ ರಾಜಕೀಯದಾಟ ಆರಂಭವಾಗಲಿದೆ.,ಇನ್ನೂ ಪ್ರತಿ ನಾಮಪತ್ರ ಸಲ್ಲಿಕೆ ಕೇಂದ್ರಗಳಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದ್ದು, ನಾಮಪತ್ರ ಸಲ್ಲಿಕೆ ವೇಳೆ ಅಭ್ಯರ್ಥಿ ಜೊತೆ 5 ಜನರಿಗೆ ಮಾತ್ರ ನಾಮಪತ್ರ ಕೇಂದ್ರದ ಒಳಗೆ ಪ್ರವೇಶ ನೀಡಲಾಗಿದೆ, ನಾಮಪತ್ರ ಸಲ್ಲಿಸುವ ವೇಳೆ ವಿಡಿಯೋ ರೇಕರ್ಡಿಂಗ್ ಮಾಡಲಾಗುತ್ತೆ , ಹಾಗೂ ಪ್ರತಿ ಕೇಂದ್ರದ ಸೂತ್ತಮುತ್ತ ಸಿಸಿ ಕ್ಯಾಮಾರ್ ಅಳವಾಡಿಕೆ ಮಾಡಲಾಗಿದೆ, ಇನ್ನು, ಕಳೆದೆಲ್ಲಾ ಚುನಾವಣೆಗಳಿಗಿಂತ ಈ ಚುನಾವಣೆ ಖಂಡಿತವಾಗಿಯೂ ವಿಭಿನ್ನವಾಗಿರಲಿದೆ. ಬಿಜೆಪಿ ಪಕ್ಷ ತನ್ನ ಸರ್ಕಾರ ರಚಿಸೋಕೆ ಕಾಂಗ್ರೆಸ್ ಹಾಗು ಜೆಡಿಎಸ್ ನಾಯಕರನ್ನು ಆಪರೇಶನ್ ಮಾಡಿದ ನಂತರದ ಮೊದಲನೇ ಚುನಾವಣೆ ಇದಾಗಿದ್ದು, ಯಾವೆಲ್ಲಾ ಅಭ್ಯರ್ಥಿಗಳು ಇನ್ನು ಏನೇನು ಮಾಡ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ