ಹಠಕ್ಕೆ ಬಿದ್ದು ಚಿಕ್ಕಬಳ್ಳಾಪುರಕ್ಕೆ ಬಸ್ ಬಿಟ್ಟು ಕೈ ಸುಟ್ಟುಕೊಂಡ ಬಿಎಂಟಿಸಿ

ಬುಧವಾರ, 12 ಏಪ್ರಿಲ್ 2023 (19:14 IST)
ಬಿಎಂಟಿಸಿ ಬಸ್  ಸದ್ಯ ಚಿಕ್ಕಬಳ್ಳಾಪುರಕ್ಕೂ ಸೇವೆ ಆರಂಭಿಸಿದೆ. ಕೆಎಸ್ಆರ್ಟಿಸಿ ವಿರೋಧ ಮಾಡಿದರೂ ಹಠಕ್ಕೆ ಬಿದ್ದು ಬೆಂಗಳೂರಿನಿಂದ ಚಿಕ್ಕಬಳ್ಳಾಪುರದವರೆಗೆ ಬಿಎಂಟಿಸಿ ಬಸ್ ಆರಂಭಸಿದ್ದಾರೆ. ಬೆಂಗಳೂರು ಟು ಚಿಕ್ಕಬಳ್ಳಾಪುರಕ್ಕೆ 80 ರೂಪಾಯಿ ದರ ಕೂಡ ನಿಗದಿ ಆಗಿತ್ತು. ಆದರೆ ಕಳೆದ 20 ದಿನದಿಂದಲೂ ಚಿಕ್ಕಬಳ್ಳಾಪುರ ಬಸ್ ಕಲೆಕ್ಷನ್ ಫುಲ್ ಡಲ್‌ ಆಗಿದೆ . ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ಪ್ರತಿನಿತ್ಯ ಎಸಿ ಬಸ್ಗಳ ಸಂಚಾರ 6 ಟ್ರಿಪ್ ಇದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಬಸ್ ಹತ್ತುತ್ತಿಲ್ಲ. ಚಿಕ್ಕಬಳ್ಳಾಪುರ 40 ಕಿಲೋ ಮೀಟರ್ಗಿಂತ ಹೆಚ್ಚಾಗಿರುವ ಕಾರಣ ತಿಂಗಳ ಹಾಗೂ ದಿನದ ಬಸ್ ಪಾಸ್ ಅನ್ವಯ ಆಗಲ್ಲ. ಪ್ರತಿ ಟ್ರಿಪ್ಗೆ 12-15 ಪ್ರಯಾಣಿಕರು ಇರುವುದು ಹೆಚ್ಚು. ಪ್ರತಿ ಟ್ರಿಪ್ಗೆ 10 ಸಾವಿರ ಕಲೆಕ್ಷನ್ ಮೀರುತ್ತಿಲ್ಲ. ಬಿಎಂಟಿಸಿ ಎಸಿ ಬಸ್ಗಳಲ್ಲಿ ಕೇವಲ ಬೆರಳೆಣಿಕೆಯಷ್ಟು ಜನ ಸಂಚಾರ ಇರುವುದರಿಂದ ನಷ್ಟ ಅನುಭವಿಸುವಂತಾಗಿದೆ.‌ ರಾಜಕೀಯ ಕಾರಣಕ್ಕಾಗಿ ಸಚಿವರು ತೆಗೆದುಕೊಂಡ ನಿರ್ಧಾರ ಬಿಎಂಟಿಸಿಗೆ ಸಂಕಷ್ಟ ತಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ