ಮಂಡ್ಯ: ಕಳೆದ ಲೋಕಸಭೆ ಚುನಾವಣೆ ನಂತರ ಹೆಚ್ಚು ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಮಂಡ್ಯ ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರು ಹೊಸ ವರ್ಷಸಿಂದ ಮತ್ತೇ ಪಕ್ಷ ಸಂಘಟನೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು, ನನ್ನ ರಾಜಕಾರಣ ಮಂಡ್ಯದಲ್ಲೇ ಆಗಿರುತ್ತದೆ. ಕಳೆದ ಐದು ವರ್ಷಗಳಲ್ಲಿ ನನಗೆ ಅಂತಾ ಸಮಯ ಮೀಸಲಿಟ್ಟಿಲ್ಲ. ನನಗೆ ಅಂತಾ ರೆಸ್ಟ್ ಬೇಕಿತ್ತು. ಇನ್ಮುಂದೆ ಮತ್ತೇ ಮಂಡ್ಯದಲ್ಲಿ ಓಡಾಟ ನಡೆಸಿ. ಪಕ್ಷ ಸಂಘಟನೆ ಮಾಡುತ್ತೇನೆ ಎಂದರು.
ಬಿಜೆಪಿಯಲ್ಲಿ ಸುಮಲತಾ ಸೈಡ್ ಲೈನ್ ಆದರಾ ಎಂಬ ವಿಚಾರವಾಗಿ ಮಾತನಾಡಿದ ಅವರು, ನಾನು ಸೈಡ್ ಲೈನ್ ಅಂತಾ ನೋಡುತ್ತಿಲ್ಲ. ಬಿಜೆಪಿ ಅವರು ನನ್ನನ್ನ ಚುನಾವಣಾ ಪ್ರಚಾರಕ್ಕೆ ಕರೆಯದೇ ಇರುವ ಬಗ್ಗೆ ಅಷ್ಟಾಗಿ ನಾನು ಗಮನ ಕೊಟ್ಟಿಲ್ಲ. ನನ್ನ ಅಗತ್ಯವಿದ್ದಲ್ಲಿ ಪ್ರಚಾರಕ್ಕೆ ಕರೆಯುತ್ತಾರೆ ಎಂದು ಅಂದುಕೊಂಡಿದ್ದೇನೆ ಎಂದರು.
ಮಂಡ್ಯದಲ್ಲಿ ಪಕ್ಷ ಬಲಪಡಿಸಬೇಕು ಎಂದು ಈಗಾಗಲೇ ಹೈಕಮಾಂಡ್ಗೆ ಹೇಳಿದ್ದೇನೆ. ಹೆಚ್ಚು ಸಕ್ರೀಯವಾಗಿ ಇಲ್ಲ. ನನ್ನ ಅಸಮಾಧಾನವನ್ನ ತಿಳಿಸಿದ್ದೇನೆ. ಮೈತ್ರಿ ಇದ್ದಾಗ ಪಕ್ಷ ಸಂಘಟನೆ ಒಂದು ಚಾಲೆಂಜ್. ಚುನಾವಣೆ ನಂತರ ಈ ಕಡೆ ಗಮನಹರಿಸುತ್ತಾರೆ. ನಾನು ನಿರೀಕ್ಷೆ ಇಟ್ಟುಕೊಂಡು ಕೆಲಸ ಮಾಡಿಲ್ಲ. ಬೆಂಬಲಿಗರು ಆಸೆ ಪಡುವುದರಲ್ಲಿ ತಪ್ಪಿಲ್ಲ. ನನ್ನ ರಾಜಕಾರಣ ಮಂಡ್ಯದಲ್ಲಿ ಇರುತ್ತದೆ ಎಂದಿದ್ದಾರೆ.