18 ದಿನದಲ್ಲಿ ಕೇವಲ 20 ಸಾವಿರ ರೂ ಖರ್ಚಿನಲ್ಲಿ ಉತ್ತರ ಭಾರತ ಪ್ರವಾಸ ಮಾಡಿ

Krishnaveni K

ಬುಧವಾರ, 8 ಜನವರಿ 2025 (15:19 IST)
Photo Credit: X
ಬೆಂಗಳೂರು: ಉತ್ತರ ಭಾರತ ಪ್ರವಾಸ ಮಾಡಬೇಕೆಂದರೆ ಕನಿಷ್ಠ 50 ಸಾವಿರ ರೂ.ಆದರೂ ಬೇಕು ಎಂದು ಹಿಂದೇಟು ಹಾಕುತ್ತಿದ್ದೀರಾ? ಹಾಗಿದ್ದರೆ ಕೇವಲ 20 ಸಾವಿರ ರೂ. ಖರ್ಚು ಮಾಡಿ 18 ದಿನ ಉತ್ತರ ಭಾರತ ಪ್ರವಾಸ ಮಾಡಬಹುದು.

ಸರ್ಕಾರಿ ಎಂಎಸ್ ಐಎಲ್ ಇಂತಹದ್ದೊಂದು ಆಫರ್ ಕೊಟ್ಟಿದೆ. ವಿಶೇಷವಾಗಿ ನಿವೃತ್ತಿಯಾದವರು, ಹಿರಿಯ ನಾಗರಿಕರು, ಸರ್ಕಾರೀ ನೌಕರರನ್ನು ಗಮನದಲ್ಲಿಟ್ಟುಕೊಂಡು ಇಂತಹದ್ದೊಂದು ಯೋಜನೆ ಜಾರಿಗೆ ತರಲಾಗಿದೆ.

ಇಂದು ಸಚಿವ ಎಂಬಿ ಪಾಟೀಲ್ ಎಂಎಸ್ಐಎಲ್ ನ ಆಕರ್ಷಕ ಟೂರಿಸ್ಟ್ ಪ್ಯಾಕೇಜ್ ನ ಕ್ಯಾಲೆಂಡರ್ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು ಮೊದಲಿನಿಂದಲೂ ಎಂಎಸ್ಐಎಲ್ ಆಕರ್ಷಕ ಟೂರ್ ಪ್ಯಾಕೇಜ್ ಗಳ ಮೂಲಕ ಜನರ ವಿಶ್ವಾಸಾರ್ಹತೆ ಪಡೆದುಕೊಂಡಿದೆ. ಸೆಪ್ಟೆಂಬರ್ ನಲ್ಲಿ ವಾರಣಾಸಿ ಮತ್ತು ಆದಿಕೈಲಾಸಕ್ಕೆ ಪ್ರವಾಸ ಮಾಡಲಾಗುವುದು ಎಂದಿದ್ದಾರೆ.

ಪ್ಯಾಕೇಜ್ ನಲ್ಲಿ ಏನೆಲ್ಲಾ ಆಫರ್ ಇರುತ್ತದೆ?
ಪ್ಯಾಕೇಜ್ ನಲ್ಲಿ ಆಕರ್ಷಕ ಆಫರ್ ಗಳನ್ನು ನೀಡಲಾಗಿದೆ. ಸುರಕ್ಷತೆ, ಶುಚಿ,ರುಚಿಯಾದ ಆಹಾರ, ಸಹಾಯಕರ ನೆರವು, ಮನೆ ಬಾಗಿಲಿನಿಂದಲೇ ಕರೆದೊಯ್ಯುವ ವ್ಯವಸ್ಥೆ ನೀಡಲಾಗುತ್ತದೆ. ಒಂದು ಬ್ಯಾಚ್ ನಲ್ಲಿ 100 ಮಂದಿಗೆ ಅವಕಾಶ ನೀಡಲಾಗುತ್ತದೆ.  ಒಂದೇ ಸಮಯಕ್ಕೆ ಒಟ್ಟಿಗೇ 20 ಸಾವಿರ ರೂ. ಪಾವತಿಸಲು ಸಾಧ್ಯವಾಗದೇ ಇದ್ದರೆ ಮೊದಲು ಶೇ.50 ರಷ್ಟು ಹಣ ಪಾವತಿಸಿ ಉಳಿದ ಹಣವನ್ನು ಕಂತಿನಲ್ಲಿ ಪಾವತಿಸಬಹುದು ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ