ಕಾಂಗ್ರೆಸ್ ನಾಯಕರ ಡಿನ್ನರ್ ಮೀಟಿಂಗ್ ಗೆ ಬ್ರೇಕ್ ಹಾಕಿದ ವ್ಯಕ್ತಿ ಇವರೇ

Krishnaveni K

ಬುಧವಾರ, 8 ಜನವರಿ 2025 (10:56 IST)
ಬೆಂಗಳೂರು: ರಾಜ್ಯದಲ್ಲಿ ಡಿನ್ನರ್ ಪೊಲಿಟಿಕ್ಸ್ ಜೋರಾಗಿರುವ ಬೆನ್ನಲ್ಲೇ ಹೈಕಮಾಂಡ್ ಬ್ರೇಕ್ ಹಾಕಿದೆ. ಆದರೆ ಹೈಕಮಾಂಡ್ ಬ್ರೇಕ್ ಹಾಕಲು ಕಾರಣವಾದ ವ್ಯಕ್ತಿ ಇವರೇ.

ಡಿಕೆ ಶಿವಕುಮಾರ್ ವಿದೇಶ ಪ್ರವಾಸದಲ್ಲಿದ್ದಾಗ ತಮ್ಮ ಆಪ್ತ ಸಚಿವರೊಂದಿಗೆ ಸಿಎಂ ಸಿದ್ದರಾಮಯ್ಯ ಡಿನ್ನರ್ ಮೀಟಿಂಗ್ ನಡೆಸಿದ್ದರು. ಇದಾದ ಬಳಿಕ ಕಾಂಗ್ರೆಸ್ ನಲ್ಲಿ ಸಿಎಂ ಬದಲಾವಣೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವಾಗಿ ಅನಗತ್ಯ ಗೊಂದಲ ಶುರುವಾಗಿತ್ತು.

ನಿನ್ನೆ ಸಚಿವ ಈಶ್ವರ ಖಂಡ್ರೆ ನಾನೂ ಡಿನ್ನರ್ ಗೆ ಕರೀತೀನಿ. ಅದರಲ್ಲಿ ತಪ್ಪೇನಿದೆ ಎಂದಿದ್ದರು. ಇನ್ನು ಗೃಹಸಚಿವ ಜಿ ಪರಮೇಶ್ವರ್ ಕೂಡಾ ದಲಿತ ಶಾಸಕರು, ಸಚಿವರನ್ನು ಒಟ್ಟುಗೂಡಿಸಿ ಇಂದು ಡಿನ್ನರ್ ಮೀಟ್ ಕರೆದಿದ್ದರು. ಇದರ ಬೆನ್ನಲ್ಲೇ ಹೈಕಮಾಂಡ್ ತಕ್ಷಣವೇ ಡಿನ್ನರ್ ಮೀಟ್ ನಿಲ್ಲಿಸುವಂತೆ ಆದೇಶ ನೀಡಿದೆ. ಹೀಗಾಗಿ ಪರಮೇಶ್ವರ್ ಕೂಡಾ ತಾವು ನಡೆಸಲು ಉದ್ದೇಶಿದ್ದ ಡಿನ್ನರ್ ಮೀಟ್ ನ್ನು ಹಿಂಪಡೆದಿದ್ದಾರೆ.

ಇದೆಲ್ಲದರ ಹಿಂದೆ ಡಿಸಿಎಂ ಡಿಕೆ ಶಿವಕುಮಾರ್ ಇದ್ದಾರೆ ಎನ್ನಲಾಗಿದೆ. ರಾಜ್ಯ ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ಡಿನ್ನರ್ ಮೀಟ್ ಪೊಲಿಟಿಕ್ಸ್ ಮತ್ತು ಅದರಿಂದ ಆಗುತ್ತಿರುವ ಗೊಂದಲಗಳ ಬಗ್ಗೆ ಡಿಕೆಶಿ ಹೈಕಮಾಂಡ್ ಗೆ ವರದಿ ನೀಡಿದ್ದಾರೆ ಎನ್ನಲಾಗಿದೆ. ಈ ಕಾರಣಕ್ಕೆ ಹೈಕಮಾಂಡ್ ಮಧ್ಯಪ್ರವೇಶಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ