‘ಎಸಿಯಲ್ಲಿ ಕುಳಿತು ಸಿದ್ಧಪಡಿಸಿದ ಪ್ರಣಾಳಿಕೆಯಲ್ಲ
ಪ್ರಣಾಳಿಕೆ ಬಿಡುಗಡೆ ಮಾಡಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಮಾತನಾಡಿದ್ದಾರೆ.. ಇದು ಯಾವುದೋ ಹವಾ ನಿಯಂತ್ರಿತ ಕೊಠಡಿಯಲ್ಲಿ ಕೂತು ಸಿದ್ದಪಡಿಸಿದ ಪ್ರಣಾಳಿಕೆಯಲ್ಲ. ನಮ್ಮ ಕಾರ್ಯಕರ್ತರು ಸಾವಿರಾರು ಜನರನ್ನು ಭೇಟಿ ಮಾಡಿ ಅಭಿಪ್ರಾಯ ಪಡೆದು ಸಿದ್ದಪಡಿಸಿದ್ದಾರೆ. ಬಿಜೆಪಿ ಸರ್ಕಾರ ತೊಂದರೆಗಳನ್ನೂ ಅವಕಾಶವಾಗಿ ಪರಿವರ್ತಿಸಿದ್ದು ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಸರ್ಕಾರ. ಕಾಂಗ್ರೆಸ್ನ ಆರು ವರ್ಷಗಳ ದುರಾಡಳಿತದ ನಂತರ ನಾಲ್ಕು ವರ್ಷ ಬಿಜೆಪಿ ಉತ್ತಮ ಆಡಳಿತ ನೀಡಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರ ರಿವರ್ಸ್ ಗೇರ್ ಸರ್ಕಾರವಾಗಿತ್ತು. ಲೂಟಿ ಮಾಡಿದ್ದವರು, ಸಮಾಜಘಾತುಕ ಶಕ್ತಿಗಳು ನಿರ್ಭಯವಾಗಿ ಓಡಾಡುತ್ತಿದ್ದರು. ಕಾಂಗ್ರೆಸ್ ಸರ್ಕಾರಕ್ಕೆ ತನ್ನ ವೋಟ್ ಬ್ಯಾಂಕ್ ಗಟ್ಟಿ ಮಾಡಿಕೊಳ್ಳುವುದು ಮುಖ್ಯವಾಗಿತ್ತು. ಕಿಸಾನ್ ಸಮ್ಮಾನ್ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಸರ್ಕಾರ ಶಿಫಾರಸ್ಸು ಮಾಡಿದ್ದು ಕೇವಲ 170 ಜನರ ಹೆಸರನ್ನು ಮಾತ್ರ. ಅದೇ ಯಡಿಯೂರಪ್ಪ ಸರ್ಕಾರ ಬಂದ ಮೇಲೆ ಕಿಸಾನ್ ಸಮ್ಮಾನ್ ಕಾರ್ಯಕ್ರಮಕ್ಕೆ ಕೇಂದ್ರದ ಆರು ಸಾವಿರದ ಜೊತೆಗೆ ರಾಜ್ಯದ 4 ಸಾವಿರ ಸೇರಿಸಿ ಹತ್ತು ಸಾವಿರ ಕೊಟ್ಟರು.. ನಮ್ಮದು ಡಬಲ್ ಇಂಜಿನ್ ಸರ್ಕಾರವಾದರೆ, ಅವರದ್ದು ಟ್ರಬಲ್ ಇಂಜಿನ್ ಎಂದು ವ್ಯಂಗ್ಯವಾಡಿದ್ರು..