ಲಕ್ಷ್ಮಿ ಹೆಬ್ಬಾಳ್ಕರ್ ಜೊತೆಗೆ ವೇದಿಕೆ ಹಂಚಿಕೊಳ್ಳಲು ನಾನ್ ರೆಡಿ : ಜಾರಕಿಹೊಳಿ
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಫೆ.27ರಂದು ಪ್ರಧಾನಿ ಮೋದಿ ಬರುತ್ತಾರೆ. ಮಾ. 2ರಂದು ರಾಜಹಂಸಗಢ ಪ್ರತಿಮೆ ಲೋಕಾರ್ಪಣೆ ಮಾಡಲಿದ್ದಾರೆ. ಈ ಕಾರ್ಯಕ್ರಮ ಮುಗಿದ ಮೇಲೆ ರಾಜಕೀಯವಾಗಿ ಮಾತನಾಡೋಣ.
ಮಾರ್ಚ್ 2ರಂದು ಸಣ್ಣ ಪ್ರಮಾಣದಲ್ಲಿ ಸರ್ಕಾರಿ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ. ಅದು ಬಿಜೆಪಿ ಕಾರ್ಯಕ್ರಮ ಅಲ್ಲ ಸರ್ಕಾರಿ ಕಾರ್ಯಕ್ರಮವಾಗಿದೆ. ಶಿಷ್ಟಾಚಾರಕ್ಕೆ ಅನುಗುಣವಾಗಿ ಕೆಲಸ ಆಗುತ್ತದೆ. ಆ ಶಾಸಕರಿಗೆ ಸಿಗುವಂತಹ ಮರ್ಯಾದೆ ಸಿಗಬೇಕು. ಒಳ್ಳೆಯ ರೀತಿ ಕಾರ್ಯಕ್ರಮ ಆಗಬೇಕು ಎಂದರು.