ಶಿಕ್ಷಣ ವ್ಯಾಪಾರೀಕರಣ ಆಗ್ತಿದೆ ಎಂದ ಶಿಕ್ಷಣ ಸಚಿವ

ಬುಧವಾರ, 26 ಜೂನ್ 2019 (16:18 IST)
ಪ್ರಸ್ತುತ ದಿನಗಳಲ್ಲಿ ಶಿಕ್ಷಣ ಎನ್ನೋದು ವ್ಯಾಪಾರೀಕರಣ ಆಗ್ತಿದೆ. ಹೀಗಂತ ಶಿಕ್ಷಣ ಸಚಿವರೇ ಒಪ್ಪಿಕೊಂಡಿದ್ದಾರೆ.

ಶಿಕ್ಷಣ ಸಚಿವ ಶ್ರೀನಿವಾಸ್ ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದು, ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸಮಸ್ಯೆಗಳಿವೆ. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಜೊತೆ ಈಗಾಗಲೇ ಸಭೆ ಮಾಡಿದ್ದೇವೆ. ಆ ಶಾಲೆಗಳನ್ನ ಮೇಲ್ದರ್ಜೆಗೇರಿಸಲು ಚಿಂತನೆ ನಡೆದಿದೆ.

ಆಮೂಲಾಗ್ರ ಬದಲಾವಣೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ ಎಂದರು. ಶೌಚಾಲಯ, ಕಟ್ಟಡಗಳ ನಿರ್ಮಾಣ, ಸೌಲಭ್ಯಗಳನ್ನು ಕಲ್ಪಿಸಬೇಕಿದೆ. ಅನುದಾನವನ್ನ ನೋಡಿಕೊಂಡು ಅಭಿವೃದ್ಧಿಪಡಿಸಲಾಗುವುದು.

1200 ಕೋಟಿ ರೂ.‌ ಅನುದಾನವನ್ನ ನಮಗೆ ನೀಡಲಾಗಿದೆ. ಕೇರಳ, ದೆಹಲಿಯಲ್ಲಿ ಶಿಕ್ಷಣದ ಅಭಿವೃದ್ಧಿ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ. ಸರ್ಕಾರದಿಂದ ಉತ್ತಮ ರೀತಿ ಶಿಕ್ಷಣಕ್ಕೆ ಬೇಕಾದ ಕ್ರಮ ಕೈಗೊಳ್ಳಲಾಗುವುದು ಎಂದರು.

ಕನ್ನಡ ಮಾದ್ಯಮ ಶಾಲೆಗಳು ಉತ್ತಮ‌ ಸ್ಥಿತಿಯಲ್ಲಿವೆ. ಆದ್ರೆ ಪ್ರತಿವರ್ಷ 20ರಿಂದ30 ಶಾಲೆಗಳು ಮುಚ್ಚುತ್ತಿವೆ.

ಶಿಕ್ಷಣ ವ್ಯಾಪಾರಿಕರಣ ಆಗ್ತಿರೋದು ಇದಕ್ಕೆ ಕಾರಣ. ಖಾಸಗಿ ಶಿಕ್ಷಣ ಸಂಸ್ಥೆಗಳು ಹಳ್ಳಿಗಳಿಗೂ ವ್ಯಾನ್ ಕಳಿಸಿ ಮಕ್ಕಳನ್ನ ಕರೆತರುತ್ತಿವೆ. ಇದೆಲ್ಲವನ್ನ ಗಮನಿಸಿ ಕನ್ನಡ ಶಾಲೆಗಳ ಅಭಿವೃದ್ಧಿ ಅಗತ್ಯವಿದೆ ಅಂತ ಸಚಿವ ಶ್ರೀನಿವಾಸ್ ಹೇಳಿಕೆ ನೀಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ