ಚಾಮರಾಜಪೇಟೆಯಲ್ಲಿ ಈಗ ಮತ್ತೊಂದು ವಿವಾದದ ಹೊಗೆ

ಸೋಮವಾರ, 18 ಜುಲೈ 2022 (17:22 IST)
ಚಾಮರಾಜಪೇಟೆ ಮೈದಾನದ ಕಿಚ್ಚು ಆರುವ ಮುನ್ನವೇ ಈಗ ಮತ್ತೊಂದು ಕಿಚ್ಚುಹೊತ್ಕೊಂಡಿದೆ.ಮಸ್ ಜಿದ್ ಎ ಅಲ್ ಖುಬ ಎಂಬ ಮಸೀದಿಯನ್ನ ಡೆಮಾಲಿಷನ್ ಮಾಡಲು ಬಿಬಿಎಂಪಿ ನೋಟೀಸ್ ನೀಡಿದೆ.ಮಸ್ ಜಿದ್ ಎ ಅಲ್ ಖುಬ ವಿಜಯನಗರದಲ್ಲಿರೋ ಮಸೀದಿ.ಮುಸ್ಲಿಂವರು ಇಲ್ಲಿ ನಮಾಜ್ ಮಾಡ್ತಾರೆ ಇಂತಹ ನಮಾಜ್ ಮಾಡುವ ಈ ಕಟ್ಟಡವನ್ನ ಈಗ ಡೆಮಾಲಿಷನ್ ಮಾಡಲು ಬಿಬಿಎಂಪಿ ನೋಟೀಸ್ ನೀಡಿದೆ.ಮಸೀದಿಯೂ ಸಾರ್ವಜನಿಕರ ಓಡಾಟಕ್ಕೆ ಮೀಸಲಿಟ್ಟ ಐದು ಅಡಿ ಪ್ಯಾಸೇಜ್ ನ ಒತ್ತುವರಿ ಮಾಡ್ಕೊಂಡು ಕಟ್ಟಡಲಾಗಿದೆ.ಈಗ ಒತ್ತುವರಿ ಮಾಡಿ ನಿರ್ಮಿಸಿರುವ ಭಾಗವನ್ನ ತೆರವು ಮಾಡಿ ಬಿಬಿಎಂಪಿ ವಶಕ್ಕೆ ಪಡೆಯಲು ಪ್ರಾದೇಶಿಕ ಆಯುಕ್ತರು ಬಿಬಿಎಂಪಿಗೆ ಆದೇಶ ನೀಡಿದ್ದಾರೆ.ಇನ್ನು ಆದೇಶದ ಅನುಸಾರ ಬಿಬಿಎಂಪಿ ಮಸೀದಿಗೆ ಡೆಮಾಲಿಷನ್ ಆರ್ಡರ್ ನೀಡಿದೆ.ಒತ್ತುವರಿ ಮಾಡಲಾಗಿದೆ ಎಂಬ ಭಾಗವನ್ನ ತೆರವು ಮಾಡಲು ಮಸ್ ಜಿದ್ ಎ ಅಲ್ ಖುಬ ಮಸೀದಿಯ ಮುಖ್ಯಸ್ಥರಿಗೆ ಬಿಬಿಎಂಪಿ ನೋಟೀಸ್ ಜಾರಿ ಮಾಡಿದೆ.ನಿವೇಶನ ಸಂಖ್ಯೆ13 ಹಾಗೂ 15 ರಲ್ಲಿ ಮಸೀದಿ ನಿರ್ಮಾಣವಾಗಿದ್ದು,ನಿವೇಶನ ಸಂಖ್ಯೆ13 ರ ಮಾಲೀಕರಾಗಿದ್ದ ಪಿ ಬಾಷಾ ಒಂದು ಟ್ರಸ್ಟ್ ಗೆ ಬರೆದುಕೊಟ್ಟಿದ್ರು. ನಂತರ ನಿವೇಶನ ಸಂಖ್ಯೆ15 ರ ಮಾಲೀಕರು ಅಮೀನಾ ಎಂಬುವವರು ಕೂಡಾ ನಿವೇಶನವನ್ನ ಮಸೀದಿಗೆ ನೀಡಿದ್ದಾರೆ‌ .ಈ ಎರಡು ನಿವೇಶನಗಳನ್ನ ಒಂದೂಗೂಡಿಸಿ ಮಸೀದಿ ನಿರ್ಮಾಣ ಮಾಡಲಾಗಿತ್ತು.ಆದ್ರೆ, ಎರಡು ಸೈಟ್ ಗಳ ಮಧ್ಯೆ ನಿವೇಶನ ಸಂಖ್ಯೆ14 ಕೂಡಾ ಇತ್ತಂತೆ.ಅದನ್ನ ಒತ್ತುವರಿ ಮಾಡ್ಕೊಂಡು ಮಸೀದಿ ನಿರ್ಮಾಣ ಮಾಡಿದ್ದಾರೆ.ನಿವೇಶನ ಸಂಖ್ಯೆ 14 ,5.5 ಅಡಿ ಅಗಲ ಹಾಗೂ 45 ಅಡಿ ಉದ್ದವಿತ್ತು ಅದರನ್ನ ಸಾರ್ವಜನಿಕರ ಓಡಾಟಕ್ಕೆ ಪ್ಯಾಸೇಜ್ ಇತ್ತಂತೆ.ಅದನ್ನ ಒತ್ತುವರಿ ಮಾಡಿ ಮಸೀದಿ ನಿರ್ಮಾಣ ಮಾಡಲಾಗಿದೆ.ಆದ್ರೆ ಇದಕ್ಕೆ ಹಿಂದೆ ಬಿಬಿಎಂಪಿ ಖಾತಾ ಕೂಡಾ ಮಾಡಿಕೊಟ್ಟಿತ್ತು.ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ವಾದ ಪ್ರತಿವಾದಗಳು ನಡೆದು ಅಂತಿಮ ಆದೇಶ ಹೊರಡಿಸಲಾಗಿದೆ. ಅದರಂತೆ ನಿವೇಶನ ಸಂಖ್ಯೆ 14 ರ ಐದು ಅಡಿ ಜಾಗ ಪಾಲಿಕೆ ಸ್ವತ್ತೆಂದು ಘೋಷಿಸಿದ್ದು .ಸಾರ್ವಜನಿಕರ ಸ್ವತ್ತೆಂದು ಘೋಷಣೆ ಮಾಡಿದ್ದು ತಕ್ಷಣ ನಿಯಮಾನುಸಾರ ಕ್ರಮ ತೆಗೆದುಕೊಳ್ಳಲು ಬಿಬಿಎಂಪಿಗೆ ಪ್ರಾದೇಶಿಕ ಆಯುಕ್ತರು ಆದೇಶ ನೀಡಿದ್ದಾರೆ.ಅದರಂತೆ ಬಿಬಿಎಂಪಿ ಕೂಡಾ ಮಸೀದಿಗೆ ಡೆಮಾಲಿಷನ್ ನೋಟೀಸ್ ಜಾರಿ ಮಾಡಿದೆ. 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ