ಶಿವಮೊಗ್ಗ : ಇದೊಂದು ವಿಚಿತ್ರ ಪ್ರಕರಣ. ವರದಕ್ಷಿಣೆ ತೆಗೆದುಕೊಂಡು ಬರದಿದ್ದರೆ ಪತ್ನಿಯ ಬೆತ್ತಲೆ ವಿಡಿಯೋವನ್ನೇ ಸೋಶಿಯಲ್ ಮೀಡಿಯಾಕ್ಕೆ ಅಪ್ ಲೋಡ್
ಮಾಡುತ್ತೇನೆ ಎಂದು ಗಂಡ ಮತ್ತು ಆತನ ಕುಟುಂಬದವರು ಬೆದರಿಕೆ ಹಾಕುತ್ತಿದ್ದರು. ಶಿವಮೊಗ್ಗದ ರಿಪ್ಪನ್ ಪೇಟೆಯಿಂದ ಘಟನೆ ವರದಿಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ವೆಲ್ ಕಮ್ ಗೇಟ್ ನ ಸಂತ್ರಸ್ತೆಯ ಪತಿ ಸಲ್ಮಾನ್, ಅತ್ತೆ ಸಾಹೀರಾ, ಮಾವ ಶೌಕತ್ ಖಾನ್ ಮತ್ತು ನಾದಿನಿ ಸಮೀನಾ ವಿರುದ್ಧ ಪ್ರಕರಣ ದಾಖಲಾಗಿದೆ.
ಮಾತುಕತೆ ಮಾಡಿಕೊಂಡಂತೆ ಇನ್ನೊಂದು ಲಕ್ಷ ರೂ. ಹಣ ಬರಬೇಕು ಎಂದು ವರನ ಕುಟುಂಬ ಪಟ್ಟು ಹಿಡಿದು ಕುಳಿತುಕೊಂಡಿತ್ತು. ಕೆಲ ದಿನಗಳ ನಂತರ ಮಹಿಳೆಗೆ ಕಿರಿಕುಳ ಜೋರಾಯಿತು. ಅತ್ತೆ ಮತ್ತು ಮಾವ ಹಣ ತರುವಂತೆ ಪೀಡಿಸುತ್ತಿದ್ದರು. ಗಂಡ ಸಹ ಅವರಿಗೆ ನೆರವಾಗಿ ನಿಂತಿದ್ದ. ಇಷ್ಟು ಸಾಲದು ಎಂಬಂತೆ ನಿನ್ನ ಬೆತ್ತಲೆ ವಿಡಿಯೋ ಮಾಡಿಕೊಂಡಿದ್ದೇನೆ. ಹಣ ತರದಿದ್ದರೆ ಅದನ್ನು ಸೋಶಿಯಲ್ ಮೀಡಿಯಾಕ್ಕೆ ಅಪ್ ಲೋಡ್
ಗಂಡನ ಮನೆ ಕಿರುಕುಳ ತಾಳಲಾರದೆ ಪತ್ನಿ ತವರು ಮನೆಗೆ ಬಂದಿದ್ದಾಳೆ. ಆದರೆ ಅಲ್ಲಿಗೂ ಬಂದ ಪತಿ ಸಲ್ಮಾನ್ ಹಣಕ್ಕಾಗಿ ಪೀಡಿಸಲು ಶುರುಮಾಡಿದ್ದಾನೆ. ಈ ವೇಳೆ ತಲಾಖ್ ಸಹ ನೀಡಿದ್ದು ಹಣ ತರದಿದ್ದರೆ ಕೊಲೆ
ಇದರಿಂದ ಬೇಸತ್ತ ಪತ್ನಿ ತವರು ಮನೆಗೆ ಘಟನೆಯನ್ನು ತಂದೆ ತಾಯಿಗೆ ವಿವರಿಸಿದ್ದಾಳೆ. ಈ ವಿಚಾರವಾಗಿ ಮಹಿಳೆಯ ಕುಟುಂಬ ಪೊಲೀಸರಿಗೆ ದೂರು ನೀಡಿದ್ದಾರೆ. ಮಹಿಳೆಯ ದೂರಿನ ಆಧಾರದ ಮೇಲೆ ಪತಿ ವಿರುದ್ಧ ಐಟಿ ಕಾಯ್ದೆ 2000 ರ ಸೆಕ್ಷನ್ 67 ಮತ್ತು 67-ಎ ಅಡಿಯಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು.