ಒಂದೇ ಕುಟುಂಬದ ಐವರು ಅನುಮಾನಾಸ್ಪದವಾಗಿ ಮೃತ-ಸ್ಥಳ ಮಹಜರು ವೇಳೆ ಹಲವು ಸಾಕ್ಷ್ಯಗಳು ಪತ್ತೆ
ಭಾನುವಾರ, 19 ಸೆಪ್ಟಂಬರ್ 2021 (21:01 IST)
ಬೆಂಗಳೂರು: ಒಂದೇ ಕುಟುಂಬದ ಐವರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ ಬ್ಯಾಡರಹಳ್ಳಿ ಪೊಲೀಸರು ಸ್ಥಳ ಮಹಜರು ಮುಗಿಸಿದ್ದಾರೆ. ಸ್ಥಳ ಮಹಜರು ವೇಳೆ ಹಲವು ಸಾಕ್ಷ್ಯಗಳು ಪತ್ತೆಯಾಗಿವೆ ಎನ್ನಲಾಗಿದೆ.
ಮನೆಯಲ್ಲಿ ಒಟ್ಟು ಮೂರು ಡೆತ್ ನೋಟ್‌ಗಳು ಪತ್ತೆಯಾಗಿವೆ. ಮೃತ ಮಧುಸಾಗರ್, ಸಿಂಚನಾ ಮತ್ತು ಸಿಂಧೂರಾಣಿ ಬರೆದಿದ್ದಾರೆ ಎನ್ನಲಾದ ಮೂರು ಡೆತ್ ನೋಟ್‌ಗಳು ಪತ್ತೆಯಾಗಿವೆ ಎಂಬ ಮಾಹಿತಿ ಇದ್ದು ಈ ಡೆತ್ ನೋಟ್ ಗಳು ಶಂಕರ್ ಗೆ ಮುಳುವಾಗಲಿವೆ.
ಮೂವರ ಡೆತ್ ನೋಟ್‌ನಲ್ಲೂ ಅಪ್ಪನ ಹೆಸರನ್ನ ಮಕ್ಕಳು ಉಲ್ಲೇಖ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಆ ಡೆತ್ ನೋಟ್ ನಲ್ಲಿರೋ ಅಂಶ ಏನಾದರು ಸತ್ಯವಾದರೆ ಶಂಕರ್‌ಗೆ ಸಂಕಷ್ಟ ಎದುರಾಗಲಿದೆ.
ಜೊತೆಗೆ ಡೆತ್ ನೋಟ್ ನಲ್ಲಿರೋ ಅಂಶಗಳ ಪ್ರಕಾರ ಐಪಿಸಿ ಸೆಕ್ಷನ್ 306 ರ ಅಡಿ ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಶಂಕರ್ ಮೇಲೆ ಪ್ರಕರಣ ದಾಖಲಾಗುವ ಸಾಧ್ಯತೆಗಳು ದಟ್ಟವಾಗಿವೆ.