ಈ ಊರಲ್ಲಿ 7 ಕೊರೊನಾ ಪಾಸಿಟಿವ್ ಕೇಸ್ ಗಳು ಪತ್ತೆ

ಬುಧವಾರ, 15 ಏಪ್ರಿಲ್ 2020 (16:14 IST)
ಕೊರೊನಾ ಪಾಸಿಟಿವ್ 7 ಕೇಸ್ ಗಳು ಪತ್ತೆಯಾಗಿದ್ದು, ಜನರಲ್ಲಿ ಆತಂಕ ಹೆಚ್ಚಿಸಿದೆ.

ವಿಜಯಪುರ ಜಿಲ್ಲೆಯಲ್ಲಿ 7 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಇನ್ನೂ ಹೆಚ್ಚಿನ ವ್ಯಕ್ತಿಗಳ ಮೇಲೆ ತೀವ್ರ ನಿಗಾ ಇಡಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ  ತಿಳಿಸಿದ್ದಾರೆ.

ವಿಜಯಪುರ ಜಿಲ್ಲೆಗೆ ಈ ವರೆಗೆ ವಿದೇಶ ಮತ್ತು ಇತರ ಜಿಲ್ಲೆ ರಾಜ್ಯಗಳಿಂದ 626 ಜನರು ಆಗಮಿಸಿದ್ದು, ಇವರ ಬಗ್ಗೆ ತೀವ್ರ ನಿಗಾ ಇಡಲಾಗಿದೆ. 278 ಜನರು 28 ದಿನಗಳ ಅವಧಿ ಪೂರ್ಣಗೊಳಿಸಿದ್ದಾರೆ. ಸರ್ಕಾರದ ಹೊಸ ಆದೇಶದಂತೆ ಈಗ 28 ದಿನಗಳ ಕ್ವಾರಂಟೈನ್ ಅವಧಿ ನಿಗದಿ ಪಡಿಸಿದ್ದು, 348 ಜನರು ವಿವಿಧ ಆಸ್ಪತ್ರೆ, ಐಸೋಲೇಶನ್ಸ್, ಕೋವಿಡ್ ಆಸ್ಪತ್ರೆಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ ಎಂದಿದ್ದಾರೆ.

ಈವರೆಗೆ ಒಟ್ಟು 282 ಜನರ ಗಂಟಲು ದ್ರವ ಮಾದರಿಗಳನ್ನು ಪರೀಕ್ಷೆಗೆ ರವಾನಿಸಲಾಗಿದ್ದು, ಇದರಲ್ಲಿ 155 ಜನರ ವೈದ್ಯಕೀಯ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಇನ್ನೂ 120 ಜನರ ಪರೀಕ್ಷಾ ವರದಿ ಬರಬೇಕಾಗಿದ್ದು, 7 ಜನರ ಪಾಸಿಟಿವ್ ವರದಿ ಬಂದಿದೆ ಎಂದಿದ್ದಾರೆ. ಒಬ್ಬರು ಮೃತರಾಗಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ