ಕಂತೆ ಕಂತೆ ದಾಖಲೆ ಸಮೇತ ಸಭೆಗೆ ಆಗಮಿಸಿರುವ ಅಧಿಕಾರಿಗಳು

ಮಂಗಳವಾರ, 11 ಅಕ್ಟೋಬರ್ 2022 (21:02 IST)
ಜಿಲ್ಲಾ‌ ಉಸ್ತುವಾರಿ ಸಚಿವ ಮುನಿರತ್ನರಿಂದ ಕೋಲಾರದ ಡಿಸಿ ಕಛೇರಿಯಲ್ಲಿ ಸಭೆ ನಡೆಯುತ್ತಿದೆ.ಡಿಸಿ ವೆಂಕಟ್ ರಾಜಾ ಉಪಸ್ಥಿತಿಯಲ್ಲಿ  ಸಭೆ ನಡೆಯುತ್ತಿದ್ದು,ಸಭೆಯಲ್ಲಿ PWD ಇಲಾಖೆ, ಪಂ.ರಾಜ್ ಇಲಾಖೆ, ನಿರ್ಮಿತಿ ಕೇಂದ್ರ ಸೇರಿದಂತೆ ಎಲ್ಲಾ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದಾರೆ.ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ ಕಾಮಗಾರಿ ಹಾಗೂ ಅಭಿವೃದ್ದಿ ಕಾರ್ಯದ ಕುರಿತು ಸಭೆ ನಡೆಯುತ್ತಿದೆ.
 
ರಸ್ತೆ, ಕಟ್ಟಡ ಸೇರಿದಂತೆ ವಿವಿಧ ಕಾಮಗಾರಿಗಳ ಪರಿಶೀಲನೆ,ಟೆಂಡರ್ ಪ್ರಕ್ರಿಯೆ ಮುಗಿದು ಪ್ರಾರಂಭ ಹಾಗದೇ ಇರುವ ಕಾಮಗಾರಿಗಳು ಸೇರಿದಂತೆ ಹಾಲಿ ನಡೆಯುತ್ತಿರುವ ಕಾಮಗಾರಿಗಳ ಪರಿಶೀಲನೆ ನಡೆಸಲಾಗ್ತಿದೆ.ತಾಲ್ಲೂಕು ವಾರು ರಸ್ತೆ ಅಭಿವೃದ್ದಿ  ಕಾಮಗಾರಿಗಳ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತದೆ.ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದು ಕುದ್ದು ಸಚಿವ ಮುನಿರತ್ನ ವೀಕ್ಷಣೆ ಮಾಡಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ