ಎಣ್ಣೆ ಪಾರ್ಟಿ : ಬೆಳಗಾಗುವಷ್ಟರಲ್ಲಿ ಅತ್ತೆ ಮರ್ಡರ್!

ಮಂಗಳವಾರ, 4 ಜನವರಿ 2022 (08:33 IST)
ಚಿಕ್ಕಮಗಳೂರು : ಕುಡಿದ ಮತ್ತಿನಲ್ಲಿ ಅಳಿಯನೇ ಅತ್ತೆಯನ್ನ ಪೊರಕೆಯಲ್ಲಿ ಹೊಡೆದು ಕೊಲೆಗೈದಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಕಿಚ್ಚಬ್ಬಿ ಗ್ರಾಮದಲ್ಲಿ ನಡೆದಿದೆ.

ಮೃತರನ್ನ ಕಾಳಮ್ಮ(60) ಎಂದು ಗುರುತಿಸಲಾಗಿದೆ. ರಮೇಶ್ (35) ಅತ್ತೆಯನ್ನ ಕೊಂದ ಅಳಿಯ. ಹಳ್ಳಿ-ಹಳ್ಳಿಗಳ ಮೇಲೆ ಕೆಲಸಕ್ಕೆ ಹೋಗುವ ರಮೇಶ್ ಆಗಾಗ್ಗೆ ಮನೆಗೆ ಬಂದು ಹೋಗುತ್ತಿದ್ದನು. ಆರೋಪಿ ರಮೇಶ್ಗೆ 10 ವರ್ಷದೊಳಗಿನ ನಾಲ್ವರು ಮಕ್ಕಳಿದ್ದಾರೆ.

ಆಗಾಗ್ಗೆ ಮನೆಗೆ ಬರುತ್ತಿದ್ದ ರಮೇಶ್, ಭಾನುವಾರ ಮಧ್ಯಾಹ್ನವೂ ಮನೆಗೆ ಬಂದಿದ್ದ. ಬಂದಾಗಲೇ ಅತ್ತೆ ಜೊತೆ ಸಣ್ಣದಾಗಿ ಜಗಳವಾಡಿ ಸಮಾಧಾನವಾಗಿದ್ದ. ಸಂಜೆ ಆತನೇ ಹೋಗಿ 5 ಕ್ವಾಟರ್ ಎಣ್ಣೆ, 1 ಕೆ.ಜಿ. ಚಿಕನ್ ಹಾಗೂ ಪೋರ್ಕ್ ತಂದಿದ್ದನು.

ನನ್ನ ಗಂಡನೇ ಹೊಡೆದು, ಪೊರಕೆಯಲ್ಲಿ ಹೊಡೆದು ಮನೆಯಿಂದ ಆಚೆ ತಳ್ಳಿದ್ದ ಎಂದು ರಮೇಶ್ ಪತ್ನಿ ಮಾಹಿತಿ ನೀಡಿದ್ದಾಳೆ. ಹಲ್ಲೆ ಮಾಡಿ ರಾತ್ರಿ ಹೊರಗಡೆ ತಳ್ಳಿದ್ದ ಕಾಳಮ್ಮ ಇಡೀ ರಾತ್ರಿ ಚಳಿಯಲ್ಲಿ ಹೊರಗಿದ್ದು ಸಾವನ್ನಪ್ಪಿದ್ದಾಳೆ. ಮೃತ ಕಾಳಮ್ಮ ಕಣ್ಣು ಕೂಡ ಮುಚ್ಚಿಲ್ಲ. ಹಾಗೇ ಸಾವನ್ನಪ್ಪಿದ್ದಾಳೆ. ಬೆಳಗ್ಗೆ ವಿಷಯ ತಿಳಿದು ರಮೇಶ್ ನಾಪತ್ತೆಯಾಗಿದ್ದ. ಬಳಿಕ ವಿಷಯ ತಿಳಿದ ಪೊಲೀಸರು ಆರೋಪಿ ರಮೇಶ್ನನ್ನ ಬಂಧಿಸಿದ್ದಾರೆ. ಈ ಸಂಬಂಧ ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ