ಸಂಖ್ಯೆ ಲೆಕ್ಕವನ್ನೇ ತೆಗೆದುಕೊಂಡರೆ ಕೊರೋನಾದ ರೂಪಾಂತರಿ ಒಮಿಕ್ರಾನ್ ಪಾಶ್ಚಾತ್ಯ ದೇಶಗಳಲ್ಲಿ ಕಾಳ್ಗಿಚ್ಚಿನಂತೆ ಹಬ್ಬುತ್ತಿದೆ ಎಂಬುದು ಉತ್ಪ್ರೇಕ್ಷೆ ಏನಲ್ಲ. ಆದರೆ, ವೈರಸ್ ಮತ್ತು ಮನುಷ್ಯ ಇಬ್ಬರೂ ಈ ಹಂತದಲ್ಲಿ ಸಹಜೀವನ ಮಾಡಲು ಕಲಿತರಾ ಎಂಬಂಥ ಸ್ಥಿತಿ ಈಗ ಇದೆ. ಅಂದರೆ, ಒಬ್ಬರಿಂದೊಬ್ಬರಿಗೆ ಶೀಘ್ರವಾಗಿ ದಾಟಿಕೊಂಡು ವೈರಸ್ ತನ್ನ ಬದುಕು ಕಟ್ಟಿಕೊಳ್ಳುತ್ತಿದೆಯಾದರೂ ತಾನು ಹೊಕ್ಕ ದೇಹವನ್ನು ಸಾವಿನ ಮನೆಗೆ ನೂಕುವಷ್ಟರಮಟ್ಟಿಗಿನ ಪ್ರಭಾವವನ್ನು ಕಳೆದುಕೊಂಡಂತೆ ತೋರುತ್ತಿದೆ.
ಈ ವಾರದ ಪ್ರಾರಂಭದಲ್ಲಿ ಅಂದರೆ ಸೋಮವಾರ ಅಮೆರಿಕದಲ್ಲಿ 4,40,000 ಕೋವಿಡ್ ಪ್ರಕರಣಗಳು ವರದಿಯಾದರೆ, ಇಂಗ್ಲೆಂಡಿನಲ್ಲಿ 1,83,000 ಪ್ರಕರಣಗಳು ವರದಿಯಾಗಿವೆ. ಫ್ರಾನ್ಸ್, ಇಟಲಿ, ಪೋರ್ಚುಗಲ್ನಲ್ಲಿ ದಿನನಿತ್ಯದ ಪ್ರಕರಣಗಳು ತೀವ್ರ ಏರಿಕೆ ಕಂಡಿವೆ.