ವಿಜಯಪುರ ಹಬ್ಬದ ದಿನವೇ ಸೂತಕದ ಛಾಯೆ, ಸ್ನಾನಕ್ಕೆ ಹೋದ ಮೂವರು ನೀರುಪಾಲು

Sampriya

ಭಾನುವಾರ, 30 ಮಾರ್ಚ್ 2025 (22:52 IST)
ವಿಜಯಪುರ: ಆಲಮಟ್ಟಿ ಜಲಾಶಯದ ಮುಂಭಾಗದ ರೈಲ್ವೆ ಸೇತುವೆ ಕೆಳಗೆ ಕೃಷ್ಣಾ ನದಿಯಲ್ಲಿ ಯುಗಾದಿ ಪಾಡ್ಯದ ಅಂಗವಾಗಿ ಸ್ನಾನಕ್ಕೆ ತೆರಳಿದ್ದ ಮೂವರು ಯುವಕರು ನೀರು ಪಾಲಾಗಿದ್ದಾರೆ.

ಮೂವರಲ್ಲಿ ಒಬ್ಬ ಯುವಕನ ಶವ ಪತ್ತೆಯಾಗಿದ್ದು, ನಾಪತ್ತೆಯಾದ ಇನ್ನಿಬ್ಬರಿಗಾಗಿ ಹುಡುಕಾಟ ನಡೆದಿದೆ. ಮೂವರು ಬಾಗಲಕೋಟೆ ತಾಲ್ಲೂಕಿನ ಇಲ್ಯಾಳ ಗ್ರಾಮದವರು.

ಮೃತರನ್ನು ಸೋಮಶೇಖರ ಬೊಮ್ಮಣ್ಣ ದೇವರಮನಿ (15) ಶವ ಪತ್ತೆಯಾಗಿದೆ. ಇನ್ನೂ ಕೃಷ್ಣಾ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಮಲ್ಲಪ್ಪ ಬಸಪ್ಪ ಬಗಲಿ (15), ಪರನಗೌಡ ಮಲ್ಲಪ್ಪ ಬೀಳಗಿ (17) ಕಾಣೆಯಾಗಿದ್ದು, ಅವರಿಗಾಗಿ ಕೃಷ್ಣಾ ನದಿಯಲ್ಲಿ ಹುಡುಕಾಟ ನಡೆದಿದೆ.

ಘಟನೆ ನಡೆದ ತಕ್ಷಣ ಮೀನುಗಾರರು ಕಾಣೆಯಾದವರ ಹುಡುಕಾಟ ನಡೆಸಿದರು. ಒಬ್ಬ ಯುವಕನ ಶವ ಹೊರಗೆ ತೆಗೆದರು. ಕಾಣೆಯಾದವರ ಹುಡುಕಾಟಕ್ಕಾಗಿ ಬಾಗಲಕೋಟೆಯಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ