ಮದ್ಯವ್ಯಸನಿ ಪತಿಯ ಕಿರುಕುಳ ತಾಳಲಾರದೆ ಮೂವರು ಮಕ್ಕಳೊಂದಿಗೆ ನದಿಗೆ ಹಾರಿದ ತಾಯಿ

Sampriya

ಬುಧವಾರ, 5 ಮಾರ್ಚ್ 2025 (15:32 IST)
ಬೆಳಗಾವಿ: ಮದ್ಯವ್ಯಸನಿಯಾದ ಪತಿಯ ಕಿರುಕುಳ ತಾಳಲಾರದೇ ಮೂವರು ಮಕ್ಕಳೊಂದಿಗೆ ತಾಯಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಯಬಾಗ ತಾಲ್ಲೂಕಿನಲ್ಲಿ ಚಿಂಚಲಿಯಲ್ಲಿ ಇಂದು ನಡೆದಿದೆ.

ಆತ್ಮಹತ್ಯೆಗೆ ಶರಣಾದ ತಾಯಿ ಮತ್ತು ಮಕ್ಕಳನ್ನು ಚಿಂಚಲಿ ಪಟ್ಟಣದ ನಿವಾಸಿಗಳಾದ  ಶಾರದಾ ಅಶೋಕ ಡಾಲೆ(32),  ಅಮೃತಾ(14), ಆದರ್ಶ(8) ಮತ್ತು ಅನುಷಾ (5) ಎಂದು ಗುರುತಿಸಲಾಗಿದೆ.

ಎಲ್ಲರ ದೇಹಗಳನ್ನು ನೀರಿನಿಂದ‌ ಹೊರ ತೆಗೆಯಲಾಗಿದೆ.

ಶಾರದಾ ಅವರ ಪತಿ ಅಶೋಕ ಡಾಲೆ ನಿತ್ಯವೂ ಕುಡಿದು ಬಂದು ಪತ್ನಿ ಹಾಗೂ ಮಕ್ಕಳಿಗೆ ಕಿರುಕುಳ
ನೀಡುತ್ತಿದ್ದ. ಇದರಿಂದ ಮನನೊಂದ ಶಾರದಾ ತನ್ನ ಮೂವರು ಮಕ್ಕಳೊಂದಿಗೆ ಸಮೀಪದ‌ ಕೃಷ್ಣ ನದಿಗೆ ಹಾರಿದ್ದರು.

ಗಮನಿಸಿದ ಸ್ಥಳೀಯರು ಒಂದು ಮಗುವನ್ನು ರಕ್ಷಿಸಿ ರಾಯಬಾಗ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಅನುಷಾ ಮೃತಪಟ್ಟಳು. ಸ್ಥಳಕ್ಕೆ ಧಾವಿಸಿದ ಕುಡಚಿ ಪೊಲೀಸರು ಪತಿ ಅಶೋಕ ಡಾಲೆ ಅವರನ್ನು ಬಂಧಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ