ಹೀಗಾಗಿ ಈರುಳ್ಳಿ ಬೆಲೆ ಅನಿರೀಕ್ಷಿತವಾಗಿ ಏರಿಕೆಯಾಗದಂತೆ ಸರ್ಕಾರ ಸಂಪೂರ್ಣ ಯೋಜನೆ ಸಿದ್ಧಪಡಿಸಿದೆ. ಕಡಿಮೆ ಬೆಲೆಯ ಈರುಳ್ಳಿಯ ಲಾಭವನ್ನು ಪಡೆದುಕೊಂಡು ಈಗಾಗಲೇ ಈರುಳ್ಳಿಯನ್ನು ಸರಿಯಾಗಿ ಖರೀದಿಸಿ ಸಂಗ್ರಹಿಸಲಾಗಿದೆ. 2022-23ರಲ್ಲಿ ಬಫರ್ ಸ್ಟಾಕ್ ನಿರ್ಮಿಸಲು ಸರ್ಕಾರವು ರೈತರಿಂದ 2.5 ಲಕ್ಷ ಟನ್ ಈರುಳ್ಳಿಯನ್ನು ಸಂಗ್ರಹಿಸಿದೆ. ಈರುಳ್ಳಿ ಬೆಲೆ ಏರಿಕೆಯಾದರೆ ಈ ಸಂಗ್ರಹವಾಗಿರುವ ಈರುಳ್ಳಿಯನ್ನು ಪೂರೈಸಲು ಸಿದ್ಧವಾಗಿದೆ. ಕೃಷಿ ಇಲಾಖೆಯಿಂದ ಬಂದಿರುವ ಮಾಹಿತಿ ಪ್ರಕಾರ ಕಳೆದ ವರ್ಷ 26.64 ಮಿಲಿಯನ್ ಈರುಳ್ಳಿ ಉತ್ಪಾದನೆಯಾಗಿದೆ. ಈ ವರ್ಷ 37.17 ಮಿಲಿಯನ್ ಟನ್ ಉತ್ಪಾದನೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಈರುಳ್ಳಿ ಬೆಲೆ ಹೆಚ್ಚಾಗುವ ರಾಜ್ಯಗಳ ಆಧಾರದ ಮೇಲೆ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಶೇಖರಿಸಿದ ಈರುಳ್ಳಿಯನ್ನು ಮಾರುಕಟ್ಟೆಗೆ ತರಲಾಗುತ್ತದೆ.