ಆನ್ ಲೈನ್ ಕ್ಲಾಸ್ ಪ್ರಭಾವ: ಕಣ್ಣು ಪರೀಕ್ಷೆ ಮಾಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಳ

ಬುಧವಾರ, 15 ಜುಲೈ 2020 (08:46 IST)
ಬೆಂಗಳೂರು: ಸರ್ಕಾರವೇನೋ ಆನ್ ಲೈನ್ ಕ್ಲಾಸ್ ನಡೆಸುವುದಕ್ಕೆ ಅನುಮತಿ ನೀಡಿದೆ. ಕೊರೋನಾದಿಂದಾಗಿ ಶಾಲೆ, ಕಾಲೇಜು ತೆರೆಯಲು ಸಾಧ‍್ಯವಾಗದ ಕಾರಣ ಇದು ಅನಿವಾರ್ಯವೂ ಹೌದು. ಆದರೆ ಇದರಿಂದ ವಿದ್ಯಾರ್ಥಿಗಳು, ಶಿಕ್ಷಕರು ನೇತ್ರ ತಜ್ಞರ ಬಳಿ ಪರೀಕ್ಷಿಸಿಕೊಳ್ಳುವ ಪ್ರಮಾಣವೂ ಹೆಚ್ಚಿದೆ.
 



ಆನ್ ಲೈನ್ ಕ್ಲಾಸ್ ಗಾಗಿ ಗಂಟೆಗಟ್ಟಲೆ ಮೊಬೈಲ್, ಲ್ಯಾಪ್ ಟಾಪ್ ಗಳ ಮುಂದೆ ಕೂರುವ ಮಕ್ಕಳು, ಶಿಕ್ಷಕರು ಕಣ್ಣಿನ ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ ನೇತ್ರ ಪರೀಕ್ಷೆ ಮಾಡಿಸಿಕೊಳ್ಳಲು ಆಸ್ಪತ್ರೆಗಳಿಗೆ ಎಡತಾಕುತ್ತಿದ್ದಾರೆ.

ದಿನವಿಡೀ ಮೊಬೈಲ್ ನಲ್ಲಿ ಪಾಠ ಕೇಳಿದ ಮೇಲೆ ಬೇರೆ ವಿಚಾರಗಳಿಗೆ ಮೊಬೈಲ್ ನೋಡಬೇಕೂ ಎನಿಸುವುದಿಲ್ಲ ಎಂಬುದು ಕೆಲವು ವಿದ್ಯಾರ್ಥಿಗಳ ಮಾತು. ಇನ್ನು, ಶಿಕ್ಷಕರೂ ತಮ್ಮ ವಿದ್ಯಾರ್ಥಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರಲು ಅನಿವಾರ್ಯವಾಗಿ ಮೊಬೈಲ್, ಲ್ಯಾಪ್ ಟಾಪ್ ಗಳಿಗೆ ಜೋತುಬೀಳಬೇಕಾಗುತ್ತದೆ. ಹೀಗಾಗಿ ಕಣ್ಣುರಿ, ತಲೆನೋವು, ಕಣ್ಣು ನೋವು, ದೃಷ್ಟಿ ಮಂದವಾಗುವುದು ಇತ್ಯಾದಿ ಸಮಸ್ಯೆಗಳಿಗಾಗಿ ವಿದ್ಯಾರ್ಥಿಗಳು, ಶಿಕ್ಷಕರು ನೇತ್ರ ಪರೀಕ್ಷೆ ಮಾಡಿಸಿಕೊಳ್ಳುತ್ತಿರುವುದು ಮಾಮೂಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ