ಸರ್ಕಾರ ರಚನೆಯಾಗಿ 6 ತಿಂಗಳು ಕಳೆದರೂ ತೆರೆಯದ ಕಚೇರಿ

ಶುಕ್ರವಾರ, 30 ನವೆಂಬರ್ 2018 (13:59 IST)
ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಡಿಸಿಎಂ ಡಾ. ಜಿ. ಪರಮೇಶ್ವರ್ ತುಮಕೂರು ಜಿಲ್ಲೆಯ ಜನತೆಗೆ ನಾಟ್ ರೀಚಬಲ್ ಆಗಿದ್ದಾರಂತೆ.

ಡಾ.ಜಿ.ಪರಮೇಶ್ವರ ಅವರ ತುಮಕೂರುನಲ್ಲಿರುವ ಜಿಲ್ಲಾ ಕಚೇರಿ ಬಾಗಿಲು ತೆರೆದಿಲ್ಲವೆಂಬ ಆರೋಪ ಕೇಳಿಬಂದಿದೆ. ಸರ್ಕಾರ ರಚನೆಯಾಗಿ ಆರು ತಿಂಗಳು ಕಳೆದರೂ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವರ ಕೊಠಡಿ ತೆರೆದಿಲ್ಲ. ಕೊಠಡಿ ಸಂಖ್ಯೆ 114 ಬಾಗಿಲಲ್ಲಿ ನೇಮ್ ಬೋರ್ಡ್ ನೇತು ಹಾಕಲಾಗಿದೆ.

ಆದ್ರೆ ಕಳೆದ ಆರು ತಿಂಗಳಿಂದಲೂ ಬೀಗ ಹಾಕಿ ಮುಚ್ಚಿದ ಬಾಗಿಲು ಮುಚ್ಚಿದಂತಿಗೆ. ಇನ್ನೂ ತುಮಕೂರು ಗ್ರಾಮಾಂತರ ಕೊರಾ ಹೋಬಳಿ ಕೊರಟಗೆರೆ ವಿಧಾನ ಸಭಾ ಕ್ಷೇತ್ರಕ್ಕೆ ಸೇರುವುದರಿಂದ ತಾಲ್ಲೂಕು ಪಂಚಾಯ್ತಿ ಕಚೇರಿಯಲ್ಲಿಯೂ ಸಹ ಕೊಠಡಿಯನ್ನು ಮೀಸಲಿರಿಸಲಾಗಿದೆ. ಈ ಕೊಠಡಿಯಲ್ಲಿ ಪರಮೇಶ್ವರ್ ರ ಕ್ಯಾಬಿನ್  ಗೋಡೌನ್ ಆಗಿದೆ.

ಜೇಡ ಬಲೆ ಹೆಣೆದು ಧೂಳು ತುಂಬಿದ ಕಸದ ತೊಟ್ಟಿಯಾಗಿದೆ. ಉಳಿದ ಜಾಗದಲ್ಲಿ ಅವರ ಹೆಸರಿನಲ್ಲಿ ರಾಜಕೀಯ ಪುಡಾರಿಗಳು ಅಧಿಕಾರಿಗಳ ಮೇಲೆ ದಬ್ಬಾಳಿಕೆ ಮಾಡಿಕೊಂಡು ಕಾಲ ಕಳೆಯುತ್ತಾರೆ. ಕೋರಟಗೆರೆಗೆ ಬಂದಾಗಲೆಲ್ಲ ಜನರ ಅಹವಾಲು ಸ್ವೀಕರಿಸುವ ಡಿಸಿಎಂ ಉಳಿದ 9 ತಾಲ್ಲೂಕುಗಳ ಜನರ ಪಾಲಿಗೆ ನಾಟ್ ರೀಚೆಬಲ್ ಆಗಿದ್ದಾರೆ ಎಂಬ ಆರೋಪ ಜನರಿಂದ ಕೇಳಿಬರುತ್ತಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ