ಭಾರತೀಯ ಸೇನೆಯನ್ನೇ ಮುಗಿಸುತ್ತೆ : ಪ್ರಿಯಾಂಕಾ ಗಾಂಧಿ
ಕಾಂಗ್ರೆಸ್ ಸತ್ಯಾಗ್ರಹವನ್ನುದ್ದೇಶಿಸಿ ಮಾತನಾಡಿದ ಅವರು, ಪ್ರತಿಭಟನಾಕಾರರು ಯಾವುದೇ ಕಾರಣಕ್ಕೂ ತಮ್ಮ ಹೋರಾಟ ನಿಲ್ಲಿಸಬಾರದು. ತಮ್ಮ ಆಂದೋಲನವನ್ನು ಶಾಂತಿಯುತವಾಗಿ ಮುಂದುವರಿಸಬೇಕು, ಸರ್ಕಾರವನ್ನು ಪತನಗೊಳಿಸಬೇಕು ಎಂದು ಕರೆ ನಿಡಿದ್ದಾರೆ.
ಅಗ್ನಿಪಥ್ ಯೋಜನೆಯು ದೇಶದ ಯುವಕರನ್ನು ಕೊಲ್ಲುತ್ತದೆ, ಸೈನ್ಯವನ್ನು ಮುಗಿಸುತ್ತದೆ. ದಯವಿಟ್ಟು ಈ ಸರ್ಕಾರದ ಉದ್ದೇಶವನ್ನು ನೋಡಿ. ಪ್ರಜಾಸತ್ತಾತ್ಮಕ, ಶಾಂತಿಯುತ ಮತ್ತು ಅಹಿಂಸಾತ್ಮಕ ಮಾರ್ಗಗಳ ಮೂಲಕ ಸರ್ಕಾರವನ್ನು ಉರುಳಿಸಿ. ದೇಶದ ಆಸ್ತಿಯನ್ನು ರಕ್ಷಿಸುವ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ ಎಂದು ಹೇಳಿದ್ದಾರೆ.