ಖುರಾನ್ ಪಠಣಕ್ಕೆ ಅವಕಾಶ

ಬುಧವಾರ, 13 ಏಪ್ರಿಲ್ 2022 (20:51 IST)
ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣ ಬೇಲೂರಿನ ಚನ್ನಕೇಶವಸ್ವಾಮಿ ರಥೋತ್ಸವ ಸಡಗರ ಸಂಭ್ರಮದಿಂದ ನಡೆಯಿತು. ಸಂಪ್ರದಾಯದಂತೆ ಈ ವರ್ಷವು ತೇರು ಕದಲುವ ಮೊದಲು ಕುರಾನ್ ಪಠಿಸಲು ಮುಜರಾಯಿ ಇಲಾಖೆಯು ಅವಕಾಶ ನೀಡುವ ಮೂಲಕ ವಿವಾದಕ್ಕೆ ತೆರೆ ಎಳೆಯಿತು. ಖುರಾನ್ ಪಠಣಕ್ಕೆ ಅವಕಾಶ ನೀಡುವ ಬಗ್ಗೆ ಸೂಕ್ತ ನಿರ್ದೇಶನ ಕೋರಿ ದೇಗುಲದ ಆಡಳಿತಾಧಿಕಾರಿ ವಿದ್ಯುಲ್ಲತಾ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ಕಚೇರಿಗೆ ನಿನ್ನೆ ಪತ್ರ ಬರೆದಿದ್ದರು. ಇದಕ್ಕೆಉತ್ತರವಾಗಿ ಆಯುಕ್ತೆ ರೋಹಿಣಿ ಸಿಂಧೂರಿ ಇಲಾಖೆಯ ನಿರ್ದೇಶನ ಪತ್ರ ಕಳುಹಿಸಿದ್ದಾರೆ. ಹಿಂದೂ ಧಾರ್ಮಿಕ ಕಾಯ್ದೆ 2002ರ ಸೆಕ್ಷನ್ 58ರ ಪ್ರಕಾರ ದೇಗುಲದ ಧಾರ್ಮಿಕ ಆಚರಣೆ, ಸಂಪ್ರದಾಯಗಳಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಉಲ್ಲೇಖಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ