ಕಿಟ್ ಕ್ಯಾಟ್ ಚಾಕೋಲೇಟ್ ರ್ಯಾಪರ್ ಮೇಲೆ ಜಗನ್ನಾಥ ದೇವರ ಭಾವಚಿತ್ರ ಪ್ರಕಟಿಸಿರುವುದು ಭಕ್ತರ ತೀವ್ರ ವಿರೋಧಕ್ಕೆ ಕಾರಣವಾಗಿದ್ದು, ನೆಸ್ಟ್ಲೆ ಕಂಪನಿ ಕೂಡಲೇ ವಿವಾದಾತ್ಮಕ ಕವರ್ ಅನ್ನು ವಾಪಸ್ ಪಡೆದಿದೆ.
ಚಾಕೋಲೆಟ್ ತಿಂದ ನಂತರ ಮಕ್ಕಳು ಕವರ್ ಅನ್ನು ರಸ್ತೆಯಲ್ಲಿ, ಚರಂಡಿಯಲ್ಲಿ ಎಲ್ಲೆಂದರಲ್ಲಿ ಬಿಸಾಡುತ್ತಿದ್ದಾರೆ.
ದೇವರಿಗೆ ಅಪಮಾನ ಆಗುತ್ತಿದೆ ಎಂದು ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಈ ಹಿನ್ನೆಲೆಯಲ್ಲಿ ನೆಸ್ಟ್ಲೆ ಕಂಪನಿ ಜಗನ್ನಾಥನ ಭಾವಚಿತ್ರ ಇರುವ ಕಿಟ್ ಕ್ಯಾಟ್ ಮೇಲಿನ ಕವರ್ ಅನ್ನು ವಾಪಸ್ ಪಡೆದಿದೆ.
ಬಾಬಾ ಜಗನ್ನಾಥ ಮತ್ತು ಮಾತಾ ಸುಭದ್ರ ಅವರ ಭಾವಚಿತ್ರದ ಚಾಕೋಲೆಟ್ ಕವರ್ ಅನ್ನು ದಯಮಾಡಿ ವಾಪಸ್ ಪಡೆಯಿರಿ. ಈ ಚಾಕೋಲೇಟ್ ತಿಂದ ನಂತರ ಕಸದ ಡಬ್ಬಿ, ಚರಂಡಿ, ರಸ್ತೆ ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಆದ್ದರಿಂದ ಕವರ್ ಮೇಲಿನ ಫೋಟೊ ತೆಗೆಯಿರಿ ಎಂದು ಸಾಮಾಜಿಕ ಜಾಲತಾಣ